ಡ್ರಗ್ಸ್ ಜಾಲದವರಲ್ಲಿ ಅಡಗಿರುವ ಎಲ್ಲಾರನ್ನು ಕೂಡಲೇ ಬಂಧಿಸಿ ಯುವ ಸಮೂಹ ರಕ್ಷಿಸಿ:ಎಬಿವಿಪಿ
1 min readಹೊಸದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೊಸದುರ್ಗ ವತಿಯಿಂದ ನಗರದ ಕೆನರಾ ಬ್ಯಾಂಕ್ ವೃತ್ತದಲ್ಲಿ ನಶಾ ಮುಕ್ತ ಭಾರತಕ್ಕಾಗಿ ಹಾಗೂ ಡ್ರಗ್ಸ್ ಜಾಲದಲ್ಲಿ ತೊಡಗಿರುವವರನ್ನು ತಕ್ಷಣವೇ ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರು ಅಭಿಯಾನವನ್ನು ಉದ್ಘಾಟಿಸಿದರು. ನಗರ ಕಾರ್ಯದರ್ಶಿ ಅಜಯ್ ಗಂಜಿಕೆರೆ ಮಾತನಾಡಿ ವಿಶ್ವದಲ್ಲಿ ಅತಿ ಹೆಚ್ಚು ಯುವಸಮೂಹ ಯುವ ಸಮೂಹವನ್ನು ಹೊಂದಿರುವುದು ಭಾರತ ಈ ದೇಶದ ಯುವಕರನ್ನು ಹಾಳು ಮಾಡಿದರೆ ದೇಶವನ್ನು ಹಾಳು ಮಾಡಬಹುದು ಎಂದು ತಿಳಿದಿರುವ ದೇಶದ್ರೋಹಿಗಳು ಮತ್ತು ಸಮಾಜಘಾತುಕ ಶಕ್ತಿಗಳು ದೇಶದ ಯುವಕರನ್ನು ಮಾದಕ ವಸ್ತುಗಳ ಮುಖಾಂತರ ಅವರನ್ನು ಹಾಳು ಮಾಡಿ ಈ ದೇಶದ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಂಬ ಎಂಬುದನ್ನು ತಿಳಿದು ವ್ಯವಸ್ಥಿತವಾಗಿ ಹಾಳು ಮಾಡುತ್ತಿದ್ದಾರೆ ಅಂತಹ ದ್ರೋಹಿಗಳನ್ನು ಬಂದಿಸಿ ತಕ್ಷಣವೇ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದರು.
ಈ ವೇಳೆ ಬಸವರಾಜ್, ಸಚಿನ್, ಶರತ್ ನೊಳಂಬ , ಅಜಯ್, ವಜ್ರ, ನಮಿತ್, ರಂಜಿತ, ಯುವ, ಇದ್ದರು.