ಸರಕಾರಿ ನೌಕರರ ದಿನಾಚರಣೆ ನಿರ್ಧಾರಕ್ಕೆ ಹರ್ಷ: ಶಾಂತಪ್ಪ
1 min readಹೊಸದುರ್ಗ : ಸರಕಾರಿ ನೌಕರರ ದಿನಾಚರಣೆ ಮಾಡಲು ನಿರ್ಧರಿಸಿ ಸರಕಾರದ ಕ್ರಮಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ಶಾಂತಪ್ಪ ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ವಿನಂತಿಸಿದ ಪ್ರಯುಕ್ತ ಸಿ.ಎಂ.ಯಡಿಯೂರಪ್ಪ ನವರು ಪ್ರತಿ ವರ್ಷ ಸರಕಾರದ ಎಲ್ಲಾ ಸರಕಾರಿ ಅಧಿಕಾರಿ, ನೌಕರರ ಒಳಗೊಂಡಂತೆ ಸರಕಾರಿ ನೌಕರರ ದಿನಾಚರಣೆಗೆ ಕೂಡಲೇ ಆದೇಶಿಸಲು ಸರಕಾರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.