May 7, 2024

Chitradurga hoysala

Kannada news portal

ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ಫಿಕ್ಸ್ ಆಗಿಲ್ಲ :ಆಯೋಗ ಸ್ಪಷ್ಟನೆ

1 min read

ಬೆಂಗಳೂರು : ಗ್ರಾಮ ಪಂಚಾಯತಿ  ಚುನಾವಣೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆಯನ್ನು ನೀಡಿದೆ. ಚುನಾವಣೆ ಬಗ್ಗೆ ನಕಲಿ ರಾಜ್ಯಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಆಯೋಗ ಹೇಳಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಪ್ರಿಲ್ 5 ಮತ್ತು 9ರಂದು ನಡೆಸಲಾಗುತ್ತದೆ ಎಂಬ ನಕಲಿ ರಾಜ್ಯಪತ್ರ ಹರಿದಾಡುತ್ತಿದೆ. ಆಯೋಗವು ಚುನಾವಣೆ ಸಂಬಂಧದಲ್ಲಿ ಇದುವರೆಗೆ ಯಾವುದೇ ದಿನಾಂಕವನ್ನು ಗೊತ್ತು ಪಡಿಸಿರುವುದಿಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಾಜ್ಯ ಚುನಾವಣಾ ಆಯೋಗದ ಹೆಸರಿನಲ್ಲಿರುವ ಆದೇಶವು ನಕಲಿಯಾಗಿರುತ್ತದೆ. ಈ ಆದೇಶದ ಮೂಲಕ ಸಾರ್ವಜನಿಕರ ಗಮನಕ್ಕೆ ಇದನ್ನು ತರಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

About The Author

Leave a Reply

Your email address will not be published. Required fields are marked *