ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮ
1 min read
ಚಳ್ಳಕೆರೆ:ಕಾಲುವೇಹಳ್ಳಿಯ ಗ್ರಾಮದಲ್ಲಿ ಪ್ರತಿ ಮನೆಗೆ ಒಂದು ಗಿಡದಂತೆ 300 ಗಿಡಗಳನ್ನು ವಿತರಣಾ ಮಾಡಲಾಯಿತು, ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಮುಖಂಡ ಕೆಪಿ ಭೂತಯ್ಯ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮ ಉತ್ತಮವಾದಂತಹ ಕಾರ್ಯಕ್ರಮವಾಗಿದೆ ಗಿಡಗಳನ್ನು ನೆಡುವುದರಮೂಲಕ ಪರಿಸರವನ್ನು ಉಳಿಸಿದಾಗೆ ಆಗುತ್ತದೆ ಪರಿಣಾಮವಾಗಿ ಸಕಾಲಕ್ಕೆ ಮಳೆ ಬೆಳೆಯಾಗುತ್ತದೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿಯಾದಂತಹ ಮಹಾಂತೇಶ್ ನಾಯಕ ಮಾತನಾಡಿ ಪ್ರಧಾನ ಮಂತ್ರಿ ಅಂದ್ರೆ ಹೀಗೇ ಇರಬೇಕು ಅಂತ ಜಗತ್ತಿಗೆ ತೋರಿಸಿದ ವ್ಯಕ್ತಿ ಯುವಕರಿಗೆ ಸ್ಫೂರ್ತಿ ಜಗತ್ತೇ ಗಮನ ಸೆಳೆದಿರುವ ವ್ಯಕ್ತಿ ಭಾರತವನ್ನು ಉತ್ತುಂಗಕ್ಕೆ ರಿಸಿದವರು ನರೇಂದ್ರ ಮೋದಿ ಎಂದು ಹೇಳಿದರು.. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಪಿ ಜಯಪಾಲಯ್ಯ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಮಹಾಂತೇಶ್ ನಾಯಕ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ರಾಮ್ ರೆಡ್ಡಿ, ಶ್ರೀರಾಮುಲು ಆಪ್ತ ಸಹಾಯಕ ಆರ್ ಪಾಲಯ್ಯ, ಹಿರೇಹಳ್ಳಿ ತಾಲ್ಲೂಕು ಪಂ ಸದಸ್ಯರು ಸುನಂದಮ್ಮ, ಬಿಜೆಪಿ ಮುಖಂಡ ಗೋವಿಂದಪ್ಪ, ಶಾರದಮ್ಮ, ಮಲ್ಲೇಶ್, ರಂಗಸ್ವಾಮಿ, ಮತ್ತು ಇತರ ಬಿಜೆಪಿ ಮುಖಂಡರು ಭಾಗವಹಿಸಿದ್ದರು.