ವಾಲ್ಮೀಕಿ ಭವನದ ಕಾಮಗಾರಿ 3ನೇ ವ್ಯಕ್ತಿ ಪರಿಶೀಲನೆಗೆ ಆಗ್ರಹ.
1 min readಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದೆ ಎಂದು ನಾಯಕ ಸಮಾಜದ ಮುಖಂಡ ಮಹಂತೇಶ್ ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಮದಕರಿನಾಯಕ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಾಯಕ ಜನಾಂಗದ ಮುಖಂಡರು ಜಿಲ್ಲಾ ಕೇಂದ್ರವಾದ ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು ಅದನ್ನು ಅನೇಕ ಬಾರಿ ಅವರಿಗೆ ಸಮಾಜದ ಮುಖಂಡರು ಮನವಿ ಮಾಡಿದರು ಸಹ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿಲ್ಲ . ನಿರಂತರ ಕಳಪೆ ಕಾಮಗಾರಿ ಕಾರ್ಯ ಮಾಡುತ್ತಿದ್ದಾರೆ. ಕಾಮಗಾರಿ ಸ್ಥಳಕ್ಕೆ ತಾವು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗೀತಗೊಳಿಸಿ ಜಿಲ್ಲೆಯ ಲಕ್ಷಾಂತರ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನವನ್ನು ಮೂರನೇ ವ್ಯಕ್ತಿ ಪರಿಶೀಲಿನೆ ಮಾಡಿಸಿ ವರದಿ ತರಿಸಿಕೊಂಡು ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ನಾಯಕ ಸಮಾಜದ ಪರವಾಗಿ ಮನವಿ ಮಾಡುತ್ತೇವೆ ಜಿಲ್ಲಾಧಕಾರಿ ಅವರಿಗೆ ಮನವಿ ಮಾಡಿದರು. ನಾಯಕ ಸಮಾಜದ ಮುಖಂಡರಾದ ಲಕ್ಷ್ಮಿಸಾಗರ ರಾಜಣ್ಣ, ನಾಗೇಶ್, ವಿಜಯ್ ಕುಮಾರ್, ನಾಗರಾಜ್ ಹಳಿಯೂರು, ವಕೀಲರಾದ ,ಲಕ್ಮಣ, ಬೊರಯ್ಯ, ಅಜಯ್ ಮದಕರಿ ಇದ್ದರು.