May 23, 2024

Chitradurga hoysala

Kannada news portal

ಸಮಾಜಮುಖಿ ಹೋರಟಗಾರ ಮುರುಘರಾಜೇಂದ್ರ ಒಡೆಯರ್ ಇನ್ನಿಲ್ಲ.

1 min read

ಚಿತ್ರದುರ್ಗ ನಗರದ ಬುರುಜನ ಹಟ್ಟಿ ವಾಸಿ ಮುರುಘರಾಜೇಂದ್ರ ಒಡೆಯರ್(67)  ಅನಾರೋಗ್ಯದಿಂದ  ನಿಧನರಾಗಿದ್ದಾರೆ.
ಮೃತರು ಹಾಲುಮತ ಸಮುದಾಯದ ಹಿರಿಯ ಮುಖಂಡರು, ಕೋಟೆ ನಾಡಿನ ಜನಪರ ಹೋರಾಟದ ನಾಯಕರಾಗಿ ಮುಂಚೂಣಿಯಲ್ಲಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರರು ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗದವನ್ನು ಅಗಲಿದ್ದಾರೆ. ಭದ್ರಾ ಮೇಲ್ದಂಡೆ ಹೋರಾಟ ಸಮಿತಿ, ದಾವಣಗೆರೆ ತುಮಕೂರು ನೇರ ರೈಲ್ವೆ ಹೋರಾಟ ಸಮಿತಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.

ಮೃತರ ಅಂತ್ಯಕ್ರಿಯೆ ಮಂಗಳವಾರ ನಗರದ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಮಾಜಿ ಸಚಿವಾರದ ಹೆಚ್.ಆಂಜನೇಯ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ಸಂತಾಪ ಸೂಚಿಸಿದ್ದಾರೆ.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ರಾಜ್ಯ ಹಾಲುಮತ ಮಹಾಸಭಾದ ರಾಜ್ಯ ಅಧ್ಯಕ್ಷ ರುದ್ರಣ್ಣ ಗುಳುಗುಳಿಯವರು ,ಕ. ಪ್ರ ಕು ಸಂಘದ ಹಿರಿಯ ಉಪಾಧ್ಯಕ್ಷ ಬಿ. ಟಿ.ಜಗದೀಶ್,ರಾಜ್ಯ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಎಮ್. ಎಚ್.ಕೃಷ್ಣಮೂರ್ತಿ,ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆ ಹಟ್ಟಿ ಹನುಮಂತಪ್ಪ ಜಿಲ್ಲಾ ಮತ್ತು ತಾಲೂಕು ಹಾಲುಮತ ಮಹಾಸಭಾದ ಎಲ್ಲಾ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *