2ನೇ ವರ್ಷ ಡಿಪ್ಲೊಮಾ ಪ್ರವೇಶಾತಿ: ಅರ್ಜಿ ಆಹ್ವಾನ
1 min read
ಚಿತ್ರದುರ್ಗ,ಸೆಪ್ಟೆಂಬರ್.24:
2020-21 ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಲಭ್ಯವಿರುವ 2ನೇ ವರ್ಷ ಹಾಗೂ 3ನೇ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸ್ಥಾನಗಳನ್ನು ‘ಆನ್‍ಲೈನ್ ನಾನ್-ಇಂಟರ್ ಆ್ಯಕ್ಟೀವ್ ಕೌನ್ಸಿಲಿಂಗ್ (ಆನ್‍ಲೈನ್ ಆಪ್ಷನ್ ಎಂಟ್ರಿ) ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ ಭರ್ತಿ ಮಾಡಲು ಐ.ಟಿ.ಐ, ದ್ವಿತೀಯ ಪಿ.ಯು.ಸಿ (ವಿಜ್ಞಾನ), ದ್ವಿತೀಯ ಪಿ.ಯು.ಸಿ (ತಾಂತ್ರಿಕ ವಿಷಯಗಳು) ಇವುಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 06 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿಗಳನ್ನು ರಾಜ್ಯದ 129 ಹೆಲ್ಪಸೆಂಟರ್ ಹಾಗೂ ಸಕಾರಿ ಪಾಲಿಟೆಕ್ನಿಕ್ ಚಿತ್ರದುರ್ಗ ಕಾಲೇಜಿನಲ್ಲಿ ಪ್ರಾಚಾರ್ಯರು ಅಥವಾ ಬೋಧಕರ ಸಹಕಾರದೊಂದಿಗೆ ಆನ್‍ಲೈನ್ ಆಪ್ಷನ್ ಎಂಟ್ರಿಯನ್ನು ಉಚಿತವಾಗಿ ಮಾಡಬಹುದಾಗಿದೆ.