ತುರುವನೂರು: ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್‍ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
1 min readಚಿತ್ರದುರ್ಗ, ಅಕ್ಟೋಬರ್06:
ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ತುರುವನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೆ ವರ್ಗಾಯಿಸಿರುತ್ತದೆ. ಆದುದರಿಂದ ತುರುವನೂರು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಅಧ್ಯಯನ ಹಾಗೂ ಅಭ್ಯದಯಕ್ಕಾಗಿ ವಿಶ್ವವಿದ್ಯಾನಿಲಯವು 2020-21ನೇ ಸಾಲಿನಿಂದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್‍ಗಳಿಗೆ ಪ್ರವೇಶ ನೀಡುವ ಸಲುವಾಗಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಲ್ಲದೇ, ಕೇಂದ್ರ ಸರ್ಕಾರದ ಎನ್.ಸಿ.ಟಿ.ಇ ಇಲಾಖೆಯು ಹೊಸದಾಗಿ ಜಾರಿಗೊಳಿಸುವ ನಾಲ್ಕು ವರ್ಷಗಳ ಅವಧಿಯ ಇಂಟಿಗ್ರೇಟೆಡ್ ಟೀಚರ್ಸ್ ಎಜುಕೇಷನ್ ಪ್ರೋಗ್ರಾಂ (INTEGRATED TEACHERS EDUCATION PROGRAM) ಯೋಜನೆಯನ್ನು ಪ್ರಸಕ್ತ 2020-21ನೇ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸುತ್ತಿದೆ. ಮೇಲ್ಕಂಡ ಮೂರು ವರ್ಷಗಳ ಅವಧಿಯ ಕೋರ್ಸ್‍ಗಳು ಮತ್ತು ನಾಲ್ಕು ವರ್ಷಗಳ ನೂತನ ಇಂಟಿಗ್ರೇಟೆಡ್ ಟೀಚರ್ ಎಜುಕೇಷನ್ ಪ್ರೋಗ್ರಾಂ ಪದವಿ ಕೋರ್ಸ್‍ಗಳಿಗೆ ರಾಜ್ಯ ಸರ್ಕಾರದ ಪಿಯುಸಿ ಅಥವಾ ತತ್ಸಮಾನ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕವನ್ನು (ಸಾಮಾನ್ಯ ವರ್ಗ ರೂ.100/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರೂ.75/-)ಗಳನ್ನು ಪಾವತಿಸಿ ಪ್ರಾಂಶುಪಾಲರಿಂದ ಅರ್ಜಿಗಳನ್ನು ಪಡೆದುಕೊಂಡು ಅಕ್ಟೋಬರ್ 10ರೊಳಗೆ ಅಧಿಕೃತ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ಸಲ್ಲಿಸಬಹುದಾಗಿದೆ.