ಶಿರಾ ಜೆಡಿಎಸ್ ಅಭ್ಯರ್ಥಿ ದಿ.ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮಾಗೆ ಕೋವುಡ್ ಪಾಸಿಟಿವ್ .
1 min readಉಪಚುನಾವಣೆ JDS ಅಭ್ಯರ್ಥಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಾರ್ಯಕರ್ತರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕದೆ. ಶಿರಾ ಉಪಚುನಾವಣೆ JDS ಅಭ್ಯರ್ಥಿ ಹಾಗೂ ದಿವಂಗತ ಶಾಸಕ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮಾಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.
ನಿನ್ನೆಯಷ್ಟೇ ಕೊರೊನಾ ಪರೀಕ್ಷೆಗೆ ಅಮ್ಮಾಜಮ್ಮಾರನ್ನ ಒಳಪಡಿಸಲಾಗಿತ್ತು. ಕಳೆದ ಮೂರು ದಿನದಿಂದ 62 ವರ್ಷದ ಅಮ್ಮಾಜಮ್ಮಾ ಮೈಕೈ ನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಇದೀಗ, ಅವರಿಗೆ ಕೊರೊನಾ ದೃಢಪಟ್ಟಿರೋದನ್ನ ಅಮ್ಮಾಜಮ್ಮಾ ಪುತ್ರ ಸತ್ಯಪ್ರಕಾಶ್ ಅಧಿಕೃತವಾಗಿ ತಿಳಿಸಿದ್ದಾರೆ. ಸದ್ಯ ಅಮ್ಮಾಜಮ್ಮಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ