May 14, 2024

Chitradurga hoysala

Kannada news portal

 ಅರಿವು ನೆರವು ಕಾರ್ಯಕ್ರಮ
ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ವಿಪುಲ ಅವಕಾಶ: ರೇಷ್ಮೆ  ಇಲಾಖೆಯ ಉಪನಿರ್ದೇಶಕ ಬಿ.ಎಲ್. ಕೃಷ್ಣಪ್ಪ

1 min read

ಚಿತ್ರದುರ್ಗ, ಅಕ್ಟೋಬರ್07:
ಜಿಲ್ಲೆಯಲ್ಲಿ ಉತ್ತಮ ಹವಾಗುಣ, ಮಣ್ಣು ಇರುವುದರಿಂದ ರೇಷ್ಮೆ ಕೃಷಿಯಲ್ಲಿ ಗರಿಷ್ಟ ಇಳುವರಿ ಪಡೆಯುವ ಅವಕಾಶಗಳಿವೆ. ಹಾಗಾಗಿ ಚಿತ್ರದುರ್ಗ ಜಿಲ್ಲೆಯಿಂದ ಮಾರುಕಟ್ಟೆಗೆ ಹೋಗುವ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ದೊರೆಯುತ್ತಿದೆ ಎಂದು ರೇಷ್ಮೆ  ಇಲಾಖೆಯ ಉಪನಿರ್ದೇಶಕ ಬಿ.ಎಲ್. ಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ರೇಷ್ಮೆ ಇಲಾಖೆಯ ಸೌಲಭ್ಯಗಳ ಕುರಿತು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಉತ್ತಮವಾದ ವಾಣಿಜ್ಯ ಬೆಳೆ. ಇದರಲ್ಲಿ ಎರಡು ಭಾಗಗಳಿದ್ದು, ಹೊಲಗಳಲ್ಲಿ ಹಿಪ್ಪು ನೇರಳೆ ಅಭಿವೃದ್ಧಿ ಮಾಡುವುದು ಮತ್ತು ಮನೆಗಳಲ್ಲಿ ಹುಳು ಸಾಕಾಣಿಕೆ ಮಾಡುವುದು. ಉತ್ತಮ ಗುಣಮಟ್ಟದ ಹಿಪ್ಪು ನೇರಳೆ ಬೆಳೆಯುವುದರ ಮೂಲಕ ರೇಷ್ಮೆ ಹುಳು ಸಾಕಾಣಿಕೆ ಮಾಡಿ ಹುಳು ಉತ್ಪಾದನೆ ಮಾಡಬೇಕಾಗುತ್ತದೆ. ಒಂದು ಮಾಹೆಯಲ್ಲಿ ಒಂದು ಲಕ್ಷ ಮೊಟ್ಟೆ ಚಾಕಿಯಾಗುತ್ತದೆ. ಸುಮಾರು ಒಂದು ಟನ್ ಗೂಡು ಉತ್ಪಾದನೆಯಾಗುತ್ತದೆ. ಜಿಲ್ಲೆಯಲ್ಲಿ 2,580 ಮಂದಿ ರೇಷ್ಮೆ ಬೆಳೆಗಾರರಿದ್ದು, 282 ಗ್

ರಾಮಗಳಲ್ಲಿ ಹಿಪ್ಪು ನೇರಳೆ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಹಿಪ್ಪು ನೇರಳೆ ನರ್ಸರಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ 480 ಮಾನವ ದಿನಗಳು ಸೃಜಿಸಿ 1 ಲಕ್ಷ 68 ಸಾವಿರ  ರೂ.ಗಳ ಸೌಲಭ್ಯ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 5 ಕಾಮಗಾರಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಹಿಪ್ಪು ನೇರಳೆ ನಾಟಿ ಮಾಡುವ ರೈತರಿಗೆ ವಿಶೇಷವಾಗಿ ವಿವನ್ ತಳಿ ಅಥವಾ ಇದಕ್ಕಿಂತ ಉತ್ತಮವಾಗಿ ತಳಿ ನಾಟಿ ಮಾಡಬಹುದಾಗಿದೆ. ಸುಮಾರು 1 ಎಕರೆ 197 ಮಾನವ ಸೃಜಿಸಿ ರೂ.76,220 ರೂಗಳ ಸೌಲಭ್ಯ ಪಡೆಯಬಹುದಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 300 ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.ಹಿಪ್ಪು ನೇರಳೆ ಗುಣಮಟ್ಟವನ್ನು ಉತ್ತಮಪಡಿಸಲು ಎರಡು ಮತ್ತು ಮೂರನೇ ವರ್ಷದ ಕಾಮಗಾರಿಗೆ ನಿರ್ವಹಣೆಗಾಗಿ 79 ಮಾನನ ದಿನಗಳ ಸೃಜಿಸಿ 1 ಲಕ್ಷ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಹುಳು ಸಾಕಾಣಿಕೆ ಮನೆಗೆ ಸಹಾಯಧನ: ಹುಳು ಸಾಕಾಣಿಕೆ ಮನೆಗೆ ಸರ್ಕಾರವು ಸಹಾಯಧನ ನೀಡುತ್ತಿದೆ. ಇದರಲ್ಲಿ ನಾಲ್ಕು ರೀತಿಯ ಸಹಾಯಧನ ದೊರೆಯುತ್ತದೆ. 1 ಸಾವಿರ ಚದರ ಅಡಿ, 600 ಚ.ಅಡಿ, 225 ಚದರ ಅಡಿ ಹಾಗೂ ಕಡಿಮೆ ವೆಚ್ಚದ ಶೆಡ್ (ಗರಿ ಶೆಡ್) ಈ ನಾಲ್ಕು ರೀತಿಯಲ್ಲಿ ಸಹಾಯಧನ ನೀಡಲಾಗುತ್ತಿದೆ.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಏಪ್ರಿಲ್ 1 ರಿಂದ ಜುಲೈ 31ರವರೆಗೆ ಸರ್ಕಾರಿ ಮಾರುಕಟ್ಟೆಯಲ್ಲಿ ಗೂಡು ಮಾರಿದವರಿಗೆ ದ್ವಿತಳಿ ಗೂಡಿಗೆ 1ಕೆ.ಜಿಗೆ ರೂ. 50 ಹಾಗೂ ಮಿಶ್ರತಳಿಗೆ 1ಕೆ.ಜಿಗೆ ರೂ. 30 ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೇಷ್ಮೆ ಬೆಳೆಗಾರರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದರು.
 ರೇಷ್ಮೆ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಎಲ್. ಕೃಷ್ಣಪ್ಪ ವಿವರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಯೋಗೇಶ ಮಾತನಾಡಿ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ವಿಸ್ತರಿಸುವುದು, ವೈವಿದ್ಯಮಯ ಬೆಳಗಳ ಮೂಲಕ ಆದಾಯ ಹೆಚ್ಚಿಸುವ ಬೆಳೆಗಳನ್ನು ಬೆಳೆಯುವುದರ ಮೂಲಕ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ,  ರೇಷ್ಮೆ  ಇಲಾಖೆಯ ಉಪನಿರ್ದೇಶಕ ಬಿ.ಎಲ್. ಕೃಷ್ಣಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *