May 2, 2024

Chitradurga hoysala

Kannada news portal

ನಾಗರೀಕರ ಬಂದೂಕು ನವೀಕರಣ ಶುಲ್ಕ ಪಾವತಿಗೆ ಸೂಚನೆ:ಅಪರ ಜಿಲ್ಲಾಧಿಕಾರಿ ಸಂಗಪ್ಪ

1 min read

ಚಿತ್ರದುರ್ಗ, ಅಕ್ಟೋಬರ್17:
ನಾಗರೀಕರ ಬಂದೂಕು ಪರವಾನಗಿಗಳನ್ನು ನವೀಕರಿಸಲು ಶುಲ್ಕ ಪಾವತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪರವಾನಗೀದಾರರು 3 ವರ್ಷಕ್ಕೆ ಬದಲಾಗಿ 5 ವರ್ಷಕ್ಕೊಮ್ಮೆ ಬಂದೂಕು ಪರವಾನಗಿಗಳ ನವೀಕರಣಕ್ಕೆ ಚಲನ್ ಪಾವತಿಸಬೇಕು ಹಾಗೂ ನವೀಕರಣದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಲಗತ್ತಿಸಬೇಕು.    ಪರವಾನಗಿದಾರರು ಪ್ರತಿ ವರ್ಷಕ್ಕೆ ರೂ.500/- ರಂತೆ 5 ವರ್ಷಕ್ಕೆ ರೂ.2.500/- ಗಳನ್ನು ಪಾವತಿಸಬೇಕು. ತಡವಾಗಿ ಶುಲ್ಕ ಪಾವತಿಸಿದರೆ ದಂಡ ಶುಲ್ಕ ರೂ.2000/-ಗಳೊಂದಿಗೆ ಚಲನ್ ಹಾಜರುಪಡಿಸಬೇಕು.
  ಎಲ್ಲಾ ಪರವಾನಗಿದಾರರು ನವೀಕರಣಕ್ಕೆ ಚಿತ್ರದುರ್ಗ ಪೊಲೀಸ್ ಅಧೀಕ್ಷಕರಿಂದ  ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ. 70 ವರ್ಷ ವಯಸ್ಸಾದ ಪರವಾನಗಿದಾರರು ಅಥವಾ ಬಂದೂಕು ಬಳಸಲು ಅಶಕ್ತರು ಆಗಿರುವ ಪರವಾನಗಿಗಳನ್ನು (ಬಂದೂಕುಗಳನ್ನು) ಸಂಬಂಧಪಟ್ಟ ಪೋಲಿಸ್ ಠಾಣೆಗಳ ವಶಕ್ಕೆ ನೀಡಿ ಸ್ವೀಕೃತಿ ಪಡೆದು, ಈ ಕಚೇರಿಗೆ ರೂ.500/- ಎಸ್‍ಬಿಐ ಚಲನ್ ಪಾವತಿಸಿ ಪರವಾನಗಿಗಳನ್ನು ರದ್ದು ಪಡಿಸಲು ಅರ್ಜಿ ಸಲ್ಲಿಸಬೇಕಾಗಿದೆ.
 ಪೋಲಿಸ್ ಕೇಸ್ ಇರುವಂತಹ ಪರವಾನಗಿದಾರರು, 70 ವರ್ಷ ವಯಸ್ಸಾದ ಪರವಾನಗಿದಾರರು ಅಥವಾ ಬಂದೂಕು ಬಳಸಲು ಅಶಕ್ತರು ಆಗಿರುವ ನಾಗರೀಕರು ನವೀಕರಣಕ್ಕೆ ಸರ್ಕರಕ್ಕೆ ಚಲನ್ ಶುಲ್ಕ ಪಾವತಿಸಿದರೆ ಅದಕ್ಕೆ ಈ ಪ್ರಾಧಿಕಾರವು ಹೊಣೆಯಲ್ಲ. ಯಾವುದೇ ಕಾರಣಕ್ಕೂ ಶುಲ್ಕ ಮರು ಪಾವತಿಸುವುದಿಲ್ಲ.
  3 ಬಂದೂಕು ಗಳನ್ನು ಹೊಂದಿರುವ ನಾಗರೀಕರು ಕೇವಲ 2 ಬಂದೂಕುಗಳನ್ನು (ಆಮ್ರ್ಸ್ ಆಮೆನಮೆಂಟ್ ಆಕ್ಟ್ ಡಿಸೆಂಬರ್ 13, 2019ರ ಪ್ರಕಾರ) ಮಾತ್ರ ಹೊಂದಲು ಅವಕಾಶ ವಿರುವುದರಿಂದ ಹತ್ತಿರದ ಠಾಣೆಗೆ ಡಿಪಾಜಿಟ್ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *