ಬರವಣಿಗೆಯೇ ನನ್ನ ಫಸ್ಟ್ ಲವ್” ಲೋಕಕ್ಕೆ ಸಾರಿದ ರವಿ ನಿಧನಕ್ಕೆ ಶಾಸಕ ಟಿ.ರಘುಮೂರ್ತಿ ಸಂತಾಪ ಸೂಚನೆ.
1 min readಹಿರಿಯ ಪತ್ರಕರ್ತರು, ಖ್ಯಾತ ಲೇಖಕರು, “ಹಾಯ್ ಬೆಂಗಳೂರು” ವಾರ ಪತ್ರಿಕೆ ಮತ್ತು “ಓ ಮನಸೇ” ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ರವಿ ಬೆಳಗೆರೆ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು.
ಬರವಣಿಗೆಯೇ ನನ್ನ ‘ಫಸ್ಟ್ ಲವ್’ ಎಂದು ಲೋಕಕ್ಕೆ ಸಾರಿದ ಪ್ರತಿಭೆ ಅವರು. ವಿಶಿಷ್ಟ ಬರವಣಿಗೆಯ ಮೂಲಕ ನಾಡಿನಾದ್ಯಂತ ಪ್ರಸಿದ್ಧಿ ಪಡೆದು, ಬರಹಗಳ ಮೂಲಕವೇ ಬೆರಗು ಮೂಡಿಸಿ, ಆ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ‘ಅಕ್ಷರ ಮಾಂತ್ರಿಕ’ ಎಂದರೆ ತಪ್ಪಾಗಲಾರದು.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.