ಸಚಿವ ಸಂಪುಟಕ್ಕೆ ಯಾರು ಇನ್, ಯಾರು ಔಟ್ ಆಗಬಹುದು?
1 min readರಾಜ್ಯ : ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಸರ್ಕಾರ ಮಂತ್ರಿ ಮಂಡಲ ಪುನಾರಚನೆ , ವಿಸ್ತರಣೆ ಎಂಬುದನ್ನು ಸಿಎಂ ಯಡಿಯೂರಪ್ಪ ತುಂಬಾ ಸಿಕ್ರೇಟ್ ಆಗಿಟ್ಟಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಬದಲಾವಣೆ ಎಂಬ ಮಾತುಗಳನ್ನು ಹಾಡಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ದರಾಗಿ ಎಂಬು ಸಂದೇಶ ರವಾನಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಹಾಲಿ ಸಚಿವರು ಮತ್ತು ಪಕ್ಷ ನಿಷ್ಠರಾದ ಸಿ.ಸಿ.ಪಾಟೀಲ್ , ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಆದರೆ 3 ಸ್ಥಾನ ಖಾಲಿ ಮಾಡಿ ಒಟ್ಟು 6 ಸ್ಥಾನಗಳಿಗೆ ಹೊಸದಾಗಿ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದ್ದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಂಟಿಬಿ ನಾಗರಾಜ್, ಮುನಿರತ್ನ, ಆರ್.ಶಂಕರ್, ವಿಶ್ವನಾಥ್ ಇವರ ಜೊತೆಯಲ್ಲಿ ಮೂಲ ಬಿಜೆಪಿ ಶಾಸಕರಾದ ಉಮೇಶ್ ಕತ್ತಿ, ಯತ್ನಾಳ್, ಮಹಿಳಾ ಕೋಟದಲ್ಲಿ ಪೂರ್ಣಿಮಾ ಶ್ರೀನಿವಾಸ್, ಸುನೀಲ್ ಕುಮಾರ್, ಹಾಗೂ ರಮೇಶ್ ಜಾರಕಿಹೊಳಿ ಭೇಟಿ ಮಾಡಿರುವ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ದೊಡ್ಡ ಪಟ್ಟಿ ಇದೆ. ಇದರ ಜೊತೆಯಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಸಹ ಹಿರಿಯರು ಮತ್ತು ಅನುಭವ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು, ಸರ್ಕಾರ ಬಂದಾಗ ಆದವರೆ ಮಂತ್ರಿ ಆಗತ್ತಾರೆ. ಹೊಸಬರಿಗೆ ಅವಕಾಶ ಕಲ್ಪಸಿಬೇಕು ಎಂಬ ಮಾತನ್ನು ಹಲವು ಬಾರಿ ಹಾಡುತ್ತಿದ್ದು ಈ ಬಾರಿ ಅಚ್ಚರಿಯ ಆಯ್ಕೆಯಲ್ಲಿ ತಿಪ್ಪಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇಂದಿನ ಸಚಿವ ಸಂಪುಟ ಸಭೆಯ ನಂತರ ಯಾರಿಗೆ ಕೊನೆಯ ಸಚಿವ ಸಂಪುಟ ಸಭೆ ಆಗುತ್ತದೆ ಹಾಗೂ ಸಿಎಂ ಬಿಎಸ್ ವೈ ದೆಹಲಿಗೆ ಹೋಗಿ ಮರಳಿ ಬಂದಾಗ ವಿಸ್ತರಣೆ ಅಥವಾ ಪುನಾರಚನೆ ಎಂಬ ಸ್ಪಷ್ಟವಗುತ್ತದೆ. ಅಲ್ಲಿಯವರೆಗೂ ಎಲ್ಲಾರೂ ಕಾದು ನೋಡಬೇಕಾಗಿದೆ.