ಚಿತ್ರದುರ್ಗ ಜಿಲ್ಲೆಯ ಎಮ್ಮೆಹಟ್ಟಿ ತಲುಪಿದ ಎಸ್.ಟಿ.ಮೀಸಲಾತಿ ಪಾದಯಾತ್ರೆ .
1 min readಶ್ರೀ ಕಾಗಿನೆಲೆ ಕನಕ ಗುರುಪೀಠ ದಿಂದ ಎಸ್. ಟಿ. ಮೀಸಲಾತಿ ಪಡೆಯಲು ಪ್ರಾರಂಭವಾದ ಐತಿಹಾಸಿಕ ಪಾದಯಾತ್ರೆಯ 7ನೇ ದಿನದ ಯಾತ್ರೆಯು ಇಂದು ಸಂಜೆ ದಾವಣಗೆರೆ ಜಿಲ್ಲೆಯಿಂದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಎಮ್ಮೆಹಟ್ಟಿ , ಹಂಪನೂರು ಮೂಲಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭರಮಸಾಗರ ಪಟ್ಟಣದಲ್ಲಿ ಜಾಗೃತಿ ಮೂಡಿಸಲು ಸಭೆ ನೆಡೆಸಲಾಯಿಹಿತು
ಪಾದಯಾತ್ರೆಯ ಜಿಲ್ಲಾ ಗಡಿ ಭಾಗ ಎಮ್ಮೆ ಹಟ್ಟಿಗೆ ಆಗಮಿಸಿದಾಗ ಗ್ರಾಮದ ಮುಖಂಡ ಗಳೆಲ್ಲಾ ಸೇರೆ ಉಭಯ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನ ನಂದಾಪುರಿ ಶ್ರೀಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್.ಕೃಷ್ಣಮೂರ್ತಿ,ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆ ಹಟ್ಟಿ ಹನುಮಂತಪ್ಪ ಗ್ರಾಮ ಪಂಚಾಯತ್ ಸದಸ್ಯರು ಗಳಾದ ರಮೇಶ್, ತಿಪ್ಪಣ್ಣ,ಮಾಜಿ ಸದಸ್ಯರುಗಳಾದ ಪ್ರಭು,ನಾಗರಾಜ್,ಮಲ್ಲಿಕಾರ್ಜುನ್,ರಂಗನಾಥ್, ಈಶ್ವರಪ್ಪ, ಪಾಂಡುರಂಗ ಪ್ಪ ಇನ್ನೂ ಮುಂತಾದ ಗ್ರಾಮಗಳ ಗ್ರಾಮಸ್ಥರು ಎಮ್ಮೆ ಹಟ್ಟಿ ಗ್ರಾಮದ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು.