ಕಬೀರಾನಂದಾಶ್ರದ ಮಹಾ ಶಿವರಾಜ್ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯ ಉದ್ಯಮಿ ಬಿ.ವೆಂಕಟೇಶ್ ಆಯ್ಕೆ.
1 min readಚಿತ್ರದುರ್ಗ ಫೆ. ೧೬
ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ಮಾ. ೫ ರಿಂದ ೧೧ರವರೆಗೆ ನಡೆಯುವ ೯೧ನೇ ಮಹಾಶಿವರಾತ್ರಿ ೨೦೨೧ರ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯರು ಹಾಗೂ ವಾಣಿಜ್ಯೋಧ್ಯಮಿಗಳಾದ ಬಿ.ವೆಂಕಟೇಶ್‌ರವರನ್ನು ಆಯ್ಕೆಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಸದ್ಗುರು ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಶ್ರೀ ಮಠದಲ್ಲಿ ನಡೆದ ಸಭೆಯಲ್ಲಿ ಬಿ. ವೆಂಕಟೇಶ್‌ರವರನ್ನು ಸರ್ವಾನುಮತದಿಂದ ಆಯ್ಕೆಮಾಡುವುದರೊಂದಿಗೆ ಮಹೋತ್ಸವದ ಯಶಸ್ವಿಗೆ ಜವಾಬ್ದಾರಿಗಳನ್ನು ನೀಡಲಾಯಿತು. ಸದ್ಭಕ್ತರು ಉತ್ಸವದ ಯಶಸ್ವಿಗೆ ಸಹಕರಿಸಲು ಕೊರಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಬಿ. ವೆಂಕಟೇಶ್‌ರವರು ಮಾತನಾಡಿ ಈ ಬಾರಿಯ ಮಹಾಶಿವರಾತ್ರಿ ಮಹೋತ್ಸವ ವಿಶೇಷ ಮತ್ತು ವಿಭಿನ್ನತೆಯನ್ನು ಚಿತ್ರದುರ್ಗದ ಜನತೆಗೆ ತಲುಪುವಂತೆ ಮಾಡಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.
ಸಭೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಯವರು ನೂತನ ಅಧ್ಯಕ್ಷರನ್ನು ಅನುಮೊದಿಸಿದರು. ಕಾರ್ಯದರ್ಶಿ ವಿ.ಎಲ್. ಪ್ರಶಾಂತ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಓಂಕಾರ್ ಉಪಸ್ಥಿತರಿದ್ದರು.