ಸರ್ಕಾರ ಮಾಡದ ಕೆಲಸ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ:ಎಸ್.ಜನಾರ್ಧನ
1 min readಸರ್ಕಾರ ಮಾಡದ ಕೆಲಸವನ್ನು ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಎಸ್ ಜನಾರ್ಧನ ಹೇಳಿದರು.
ತಾಲ್ಲೂಕಿನ ದೊಡ್ಡೇರಿ ಗ್ರಾಮದ ಸಮೀಪದಲ್ಲಿ ಶ್ರೀಕೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಬಿ.ಸಿ ಟ್ರಸ್ಟ್ ನ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ 308 ನೇ ಕೆರೆ ಪುನಃ,ಶ್ಚೇತನ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ.
ಧರ್ಮಸ್ಥಳ ಸಂಘದ ವತಿಯಿಂದ ರಾಜ್ಯದಲ್ಲಿ ಸುಮಾರು 308 ಕೆರೆಗಳು 25 ಕೋಟಿ ವ್ಯಚ್ಚದಲ್ಲಿ ಕೆರೆಗಳನ್ನು ಪುನಶಚೇತನ ಗೊಳಿಸಲಾಗಿದೆ .ರಾಜರಕಾಲದಲ್ಲಿ ನಿರ್ಮಾಣವಾದ ಹಲವಾರು ಕೆರೆಗಳು ಇಂದು ಕಾಣದಾಗಿವೇ ಇಂತಹ ಕೆರೆಗಳನ್ನು ಗುರುತಿಸಿ ಅಂತಹ ಕೆರೆಗಳನ್ನು ಸ್ವಚ್ಚ ಮಾಡಲಾಗುತ್ತಿದೆ ಇದರಿಂದ ಊಳು ತುಂಬಿದ ಕೆರೆಗಳು ಸ್ವಚ್ಚವಾಗಿ ಮಳೆ ಬಂದಾಗ ಹೆಚ್ಚಿನ ನೀರು ಸಂಗ್ರಹವಾಗಿ ಜನಜಾನುವಾರುಗಳಿಗೆ ರೈತ ಕೃಷಿ ಜಮೀನುಗಳಿಗೆ ಅನುಕೂಲವಾಗುತ್ತದೆ .ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಂದ ಸುಮಾರು ಏಳು ಲಕ್ಷ ಹಣವನ್ನು ಕೆರೆ ಪುನಶ್ಚೇತನಕ್ಕೆ ನೀಡಲಾಗುತ್ತದೆ. ಜೋತೆಗೆ ಕೆರೆ ಅಭಿವೃದ್ಧಿ ಸಮಿತಿಯಿಂದು ಕೆರೆ ಅಭಿವೃದ್ಧಿ ಗೆ ಸಹಕಾರ ನೀಡಲಾಗುತ್ತದೆ ಕೆರೆಯಿಂದ ತೆಗೆದ ಮಣ್ಣನ್ನು ರೈತರು ತೆಗೆದುಕೊಂಡು ತಮ್ಮ ಜಮೀನುಗಳಿಗೆ ಬಳಸಿಕೊಳ್ಳಬಹುದು ಎಂದರು.
ಜನಜಾಗೃತಿವೇಧಿಕೆಯ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಲವಾರು ಆಭಿವೃದ್ದಿಕಾರ್ಯಗಳನ್ನುಮಾಡುತ್ತದೆ ಹಾಗೆಯೆ ದೋಡ್ಡರಿ ಕೆರೆ ಪುನಃಶ್ಚೇತನಕ್ಕೆ ಆಯ್ಕೆ ಮಾಡಿಕೊಂಡಿರುವುದು.ನಮ್ಮೇಲ್ಲರ ಅದೃಷ್ಟ .ಕೆರೆ ಅಭಿವೃದ್ದಿಗೆ ಎಲ್ಲಾರೂಸಹಕರಿಸಬೇಕು,ಕೆರೆಯಿಂದ ತೆಗೆದ ಮಣ್ಣು ತೆಗೆದು ರೈತರ ಜಮೀನುಗಳಿ ತೆಗೆದುಕೊಂಡು ಹೋಗಹೋಗಿ ಇದರ ಸದೂಪಯೋಗ ಪಡೆದುಕೊಳ್ಳಬಹುದು ಎಂದರು.
ಈ ಸಮಯದಲ್ಲಿ ತಾಲ್ಲೂಕುಪಂಚಾಯಿತಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ಗ್ರಾಮಪಂಚಾಯಿತ ಅಧ್ಯಕ್ಷೆ ಗೌರಮ್ಮ,ಪಿಡಿಓ ಪಾಲಯ್ಯ,ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ತಾಲ್ಲೂಕು ಯೋಜನೆ ಅಧಿಕಾರಿ ಲತ ಬಂಗೇರ ,ಫಕೀರಪ್ಪ,ಗ್ರಾಮಪಂಚಾಯಿತಿ ಸದಸ್ಯರು ಕೆರೆ ಸಮಿತಿಸದಸ್ಯರು ಸೇವಾ ಪತ್ರಿನಿಧಿಗಳು ಗ್ರಾಮಸ್ಥರು ಇದ್ದರು