ಮಹಿಳೆಯರಿಗೆ ಆತ್ಮ ರಕ್ಷಣೆ ತರಬೇತಿ ಅತ್ಯವಶ್ಯಕ: ಸೌಭಾಗ್ಯ ಬಸವರಾಜನ್.
1 min readವರದಿ: ಸುರೇಶ್ ಪಟ್ಟಣ್: ಚಿತ್ರದುರ್ಗ ಫೆ. ೨೪
ಮಹಿಳೆಯರು ಅನಿರೀಕ್ಷಿತವಾಗಿ ಬರುವ ಘಟನೆಗಳನ್ನು ಎದುರಿಸಿ ಸುರಕ್ಷಿತವಾಗಿರಲು ಆತ್ಮರಕ್ಷಣಾ ತರಬೇತಿ ಅತ್ಯವಶ್ಯಕ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಚಿತ್ರದುರ್ಗ ಹಾಗೂ ಗ್ರಾಮ ಪಂಚಾಯತಿ ದೊಡ್ಡ ಸಿದ್ದವ್ವನಹಳ್ಳಿ ಇವರ ಸಹಯೋಗದಲ್ಲಿ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಹದಿ ಹರೆಯದ ಹೆಣ್ಣು ಮಕ್ಕಳಿಗಾಗಿ ಆತ್ಮ ರಕ್ಷಣಾ ತರಬೇತಿ ಶಿಬಿರದ ಸಮಾರೋಪ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಬದುಕಿನ ನಿರ್ವಹಣೆಗಾಗಿ ಮಹಿಳೆಯರು ಪುರುಷರಂತೆ ಸರಿ ಸಮಾನವಾಗಿ ದುಡಿಯುವ ಅನಿವಾರ್ಯತೆ ಇದೆ ಇಂತಹ ಸಂದರ್ಭಗಳಲ್ಲಿ ತಾವು ಕೆಲಸ ಮಾಡುವ ಸ್ಥಳಗಳಿರಬಹುದು ಮತ್ತು ಹೊರಗಡೆ ಇರಬಹುದು ಕೆಲವೊಮ್ಮೆ ಅನಿರೀಕ್ಷಿತ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗ ಆತ್ಮರಕ್ಷಣಾ ಕೌಶಲ್ಯ ತಿಳಿದಿದ್ದರೆ ಎಂತಹ ಕಠಿಣ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಬೆಳೆಯುತ್ತದೆ. ಎಂದರು.
ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ ಮಹಿಳೆ ಅಬಲೆಯಲ್ಲ ಸಬಲಳು ಮತ್ತು ಸಮರ್ಥಳು ಎಂಬುದನ್ನು ಸಾಧನೆಯಿಂದ ನಿರೂಪಿಸಿದ್ದರು ನಮ್ಮಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯತೆ ಹೋಗಿಲ್ಲ ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿರುವುದು ಸಮಾಜವು ತಲೆತಗ್ಗಿಸುವಂತ ಸಂಗತಿ ಇಂತಹ ತಾರತಮ್ಯತೆಯಲ್ಲಿ ಈ ಗ್ರಾಮದ ಹೆಚ್.ಎನ್. ವರಲಕ್ಷ್ಮಿ ಯವರು ಹಿಮಂತ ಮಹಿಳಾ ವಿಕಾಸ ಸಂಸ್ಥೆಯ ಮೂಲಕ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣಾ ತರಬೇತಿ ನೀಡುವ ಮೂಲಕ ಮಹಿಳೆಯರ ಸಬಲೀಕರಣದ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.
ನಗರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಟಿ.ಆರ್. ನಯೀಂ ಅಹಮದ್ ಮಾತನಾಡಿ ಮಹಿಳೆಯರು ಆತ್ಮರಕ್ಷಣಾ ತರಬೇತಿ ಪಡೆದುಕೊಳ್ಳುವುದ ಅವಶ್ಯಕವಾಗಿದೆ ಇದರಿಂದ ತೊಂದರೆಗಳಿಂದ ಪಾರಾಗಲು ಸಹಾಯಕ ವಾಗುತ್ತದೆ ಮಹಿಳೆಯರಿಗೆ ಪೋಲೀಸ್ ಇಲಾಖೆಯು ಯಾವಾಗಲು ಸಹಾಯ ಬೆಂಬಲ ನೀಡುತ್ತದೆ ಯಾವುದೇ ತೊಂದರೆಯಲ್ಲಿ ಇರುವ ಮಹಿಳೆಯರು ಪೋಲೀಸ್ ಇಲಾಖೆಯ ನೆರವು ಪಡೆಯಬಹುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಆರ್. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಅಧ್ಯಕ್ಷೆ ಎನ್.ಶಾಂತಮ್ಮ, ಹಿಮಂತ ಮಹಿಳಾ ವಿಕಾಸ ಸಂಸ್ಥೆ ಕಾರ್ಯದರ್ಶಿ ಹೆಚ್.ಎನ್. ವರಲಕ್ಷ್ಮಿ, ಕರಾಟೆ ತರಬೇತಿದಾರೆ ಅನಿತಾ ಮಹಂತೇಶ್, ಸಮಾಜ ಸೇವಕ ಅಶೋಕ ರೆಡ್ಡಿ, ಶಿಕ್ಷಣ ಸಂಯೋಜಕ ಇನಾಯತ್, ಸಿ.ಆರ್. ಪಿ.ಬಿ.ಕೆ.ಮೀನಾವತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹೆಚ್.ರಾಜಪ್ಪ, ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಸುಧಾ ಗ್ರಾಮ ಪಂಚಾಯತಿ ಸದಸ್ಯರುಗಳ ಉಪಸ್ಥಿತರಿದ್ದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭವಾನಿ ಪ್ರಾಸ್ತಾವಿಕ ಮಾತನಾಡಿದರು, ಹನುಮಂತ ರೆಡ್ಡಿ ಸ್ವಾಗತಿಸಿ ವಂದನಾ ಹರ್ಷಿತಾ ಪ್ರಾರ್ಥಿಸಿದರು. ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.