October 16, 2024

Chitradurga hoysala

Kannada news portal

ಉಪ‌ ಸಮರದ ಕಾಂಗ್ರೆಸ್ ಪಟ್ಟಿ ರಿಲೀಸ್.

1 min read

ನವದೆಹಲಿ: ರಾಜ್ಯದಲ್ಲಿ ತೆರವಾಗಿರುವ‌ ಮೂರು ವಿಧಾನಸಭೆ‌ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳನ್ನು ಘೋಷಿಸಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ನಾರಾಯಣರಾವ್ ಅವರ‌ ಪತ್ನಿ ಮಲ್ಲಮ್ಮ‌ ಅವರಿಗೆ ಟಿಕೆಟ್ ನೀಡಲಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಪಕ್ಷ ಸೇರಿದ್ದ ಬಸವನಗೌಡ ತುರವಿಹಾಳ ಅವರನ್ನು ಮಸ್ಕಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ ಅವರ‌ ವಿರುದ್ಧ ಬಿಜೆಪಿಯಿಂದ ಸ್ಫರ್ಧಿಸಿದ್ದ ಬಸವನಗೌಡ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಇನ್ನಷ್ಟೇ ಉಪ ಚುನಾವಣೆ ಘೋಷಣೆ ಆಗಬೇಕಿರುವ‌ ಸಿಂದಗಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸಲಾಗಿದ್ದು, ದಿವಂಗತ ಎಂ.ಸಿ.‌ಮನಗೂಳಿ ಅವರ ಪುತ್ರ ಅಶೋಕ‌ ಮನಗೂಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ಮೂಲಕ ಮುಂಚಿತವಾಗಿಯೇ ಪಕ್ಷದ ಉಮೇದುವಾರಿಕೆ ಘೋಷಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 17ರಂದು ಉಪ‌ಚುನಾವಣೆ‌ ನಿಗದಿಯಾಗಿದ್ದು, ಇದೇ ವೇಳೆ ಉಪ ಚುನಾವಣೆ ನಡೆಯಲಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿಲ್ಲ.

About The Author

Leave a Reply

Your email address will not be published. Required fields are marked *