ಲೋ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ: ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟದಿರಲು ಸೂಚನೆ
1 min readಚಿತ್ರದುರ್ಗ,ಮಾರ್ಚ್22:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಾಯಕನಹಟ್ಟಿ-ತಳಕು 66ಕೆವಿ ಎಸ್.ಸಿ ಮಾರ್ಗದಿಂದ ಉದ್ದೇಶಿತ 66/11ಕೆವಿ ನೇರ್ಲಗುಂಟೆ ಕೇಂದ್ರಕ್ಕೆ 66ಕೆವಿ ಲಿಲೋ ವಿದ್ಯುತ್ ಪ್ರಸರಣ ಮಾರ್ಗದ ವರೆಗೂ 5.521 ಕಿ.ಮೀ.ಗಳಷ್ಟು ಉದ್ದದ 66ಕೆವಿ ಲಿಲೋ ವಿದ್ಯುತ್ ಪ್ರಸರಣ ಮಾರ್ಗವನ್ನು ಮಾರ್ಚ್ 22ರಂದು ಅಥವಾ ತದನಂತರ ಚೇತನಗೊಳಿಸಲಾಗುತ್ತಿರುವುದರಿಂದ ಈ 66 ಕೆವಿ ಲಿಲೋ ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರಂಬೆ, ಲೋಹದ ತಂತಿಗಳನ್ನು ಮತ್ತು ಇತರೆ ಯಾವುದೇ ವಸ್ತುಗಳನ್ನು ವಿದ್ಯುತ್ ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ಎಚ್ಚರಿಕೆಯನ್ನು ಉಲ್ಲಂಘಿಸಿದ್ದಲ್ಲಿ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರಿಯಾಗುವುದಿಲ್ಲ.
ವಿದ್ಯುತ್ ಮಾರ್ಗವು ಚಳ್ಳಕೆರೆ ತಾಲ್ಲೂಕು ಕಾಟವ್ವನಹಳ್ಳಿ, ನೇರ್ಲಗುಂಟೆ, ದೇವರಹಳ್ಳಿ, ಕಾತ್ರೀಕೆನಹಟ್ಟಿ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗವು ಹಾದು ಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.