ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ್ದೇನು.
1 min readದೆಹಲಿ: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. “ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕೊರೊನಾದಿಂದ ದೂರವಿರಲು ಇರುವ ಮಾರ್ಗಗಳು” “ನಾವು ಮುಂದಿನ ಮನ್ ಕೀ ಬಾತ್‌ನಲ್ಲಿ ಭೇಟಿಯಾಗುವ ಮೊದಲು ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆ. ಕೊರೊನಾ ನಡುವೆಯೇ ನಾವು ಸ್ವಾತಂತ್ರ್ಯ ದಿನಾಚಣೆಯನ್ನು ಆಚರಣೆ ಮಾಡಬೇಕು. ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ನೆನೆಪಿಸಿಕೊಳ್ಳೋಣ” ಎಂದು ನರೇಂದ್ರ ಮೋದಿ ಹೇಳಿದರು.ಎಫ್‌ಡಿಐ ನೀತಿಯ ಸಡಿಲಿಕೆಯ ಮುನ್ಸೂಚನೆ ನೀಡಿದ ಪ್ರಧಾನಿ ಮೋದಿ“ಮಾಸ್ಕ್ ಧರಿಸಲು ನಿಮಗೆ ಕಿರಿಕಿರಿಯಾಗುತ್ತಿದೆಯೇ?, ಮಾತನಾಡುವಾಗ ಮಾಸ್ಕ್ ತೆಗೆಯಬೇಕು ಎಂದು ಅನ್ನಿಸುತ್ತಿದೆಯೇ?. ಒಮ್ಮೆ ಡಾಕ್ಟರ್ ಸೇರಿದಂತೆ ಕೊರೊನಾ ವಾರಿಯರ್ಸ್‌ಗಳನ್ನು ನೆನಪು ಮಾಡಿಕೊಳ್ಳಿ. ಮಾಸ್ಕ್ ಧರಿಸಿ ಅವರು 8 ರಿಂದ 10 ಗಂಟೆ ಕೆಲಸ ಮಾಡುತ್ತಾರೆ” ಎಂದು ಮೋದಿ ಮನ್ ಕೀ ಬಾತ್‌ನಲ್ಲಿ ತಿಳಿಸಿದರು.
ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ
ಗ್ರಾಮ ಪಂಚಾಯಿತಿ ಸದಸ್ಯನ ಕೆಲಸಕ್ಕೆ ಶ್ಲಾಘನೆ
ಗ್ರಾಮದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಸ್ಪೇಯರ್ ತಯಾರು ಮಾಡಿದ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನ ಪುರಸಭೆ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಕೆಲಸವನ್ನು ನರೇಂದ್ರ ಮೋದಿ ಶ್ಲಾಘಿಸಿದರು.
ಕ್ವಾರಂಟೈನ್ ಸೆಂಟರ್ಜ ಜಮ್ಮುವಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು 30 ಹಾಸಿಗೆಗಳ ಕ್ವಾರಂಟೈನ್ ಕೇಂದ್ರ ಮಾಡಿದ್ದನ್ನು ಮೋದಿ ಮನ್ ಕೀ ಬಾತ್‌ನಲ್ಲಿ ನೆನಪಿಸಿಕೊಂಡರು.
ರಕ್ಷಾ ಬಂಧನ
‘ರಕ್ಷಾ ಬಂಧನ ಬರುತ್ತಿದೆ. ಈ ಬಾರಿ ಜನರು ವಿಶಿಷ್ಟವಾಗಿ ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ರಕ್ಷಾ ಬಂಧನಕ್ಕೆ ಜನರು Vocal for Local ಲಿಂಕ್ ಮಾಡುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.
ವಿದ್ಯಾರ್ಥಿಗಳ ಜೊತೆ ಸಂವಾದ
ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಹರ್ಯಾಣದ ವಿದ್ಯಾರ್ಥಿಗಳ ಜೊತೆ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮುಂದಿನ ಗುರಿ, ಮನೆಯಲ್ಲಿನ ಪ್ರೋತ್ಸಾಹ ಮುಂತಾದ ವಿಚಾರಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.