Recent Posts

October 16, 2021

Chitradurga hoysala

Kannada news portal

ಕಾರ್ಮಿಕರಿಗೆ ಕನಿಷ್ಠ 10 ಸಾವಿರ ನೀಡುವಂತೆ ಹಿರಿಯೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ.

1 min read

ಹಿರಿಯೂರು: ಹಿರಿಯೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ವತಿಯಿಂದ ರಾಜ್ಯ ಸರ್ಕಾರ ಕೋವಿಡ್ ಸಂಧರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಪ್ರಕಟಿಸಿರುವ ವಿಶೇಷ ಪ್ಯಾಕೇಜ್ ನಲ್ಲಿ 3000-/ಸಾವಿರ ರೂಪಾಯಿ ಮೊತ್ತ ನೀಡುವುದಾಗಿ ಘೋಷಿಸುರುತ್ತದೇ.
.ಆದರೆ ಸರ್ಕಾರವು ಘೋಷಿಸಿರುವ ಆರ್ಥಿಕ ಸಹಾಯ ಕಡಿಮೆಯಾಗಿದ್ದು ಇದರಿಂದ ಸದರಿ ಬಡ ಕಾರ್ಮಿಕರು ಜೀವನ ನಡೆಸಲು ಕಷ್ಟಸಾಧ್ಯವಾಗುತ್ತದೆ ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಜೀವನೋಪಯಕ್ಕಾಗಿ 10.000-/ಸಾವಿರ ಗಳಿಗೆ ಹೆಚ್ಚಿಸಿ ಕಟ್ಟಡ ಕಾರ್ಮಿಕರು ಈ ಲಾಕ್ ಡೌನ್ ಸಮಯದಲ್ಲಿ ತೊಂದರೆ ಇಲ್ಲದೆ ಜೀವನ ನಡೆಸಲು ಅನುಕೂಲ ಮಾಡಬೇಕೆಂದು ಹಿರಿಯೂರು ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಿ. ದಾದಾಪೀರ್ ರವರ ನೇತೃತ್ವ ದಲ್ಲಿ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ರವರ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂಧರ್ಭ ದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಎಸ್. ತಿಮ್ಮಯ್ಯ ಮ್ಯಾಕ್ಲ್ಯೂರ್ ಹಳ್ಳಿ. ತಾಲೂಕ್ ಉಪಾಧ್ಯಕ್ಷರಾದ ಮಾರುತಿರಾವ್ ಜಾದವ್. ಜಿಲಾನ್ ಬಾಷಾ. ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಸೈಫುಲ್ಲ. ದಾದಾಪೀರ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed