April 27, 2024

Chitradurga hoysala

Kannada news portal

ಬಾಳೆ ಹಣ್ಣಿನಿಂದ ಎಷ್ಟು ಉಪಯೋಗ, ಯಾವ ರೀತಿಯಲ್ಲಿ ಬಾಳೆಹಣ್ಣು ಸೇವಿಸಬಹುದು ನೀವೇ ನೋಡಿ.

1 min read

No
ಬಾಳೆ ಹಣ್ಣಿನ ಉಪಯೋಗ
ಬಾಳೆಹಣ್ಣು ಸಾಮಾನ್ಯ ಹಣ್ಣುಗಳಲ್ಲಿ ಒಂದಾಗಿದೆ, ಸಾಮಾನ್ಯವಾಗಿ ಇದು ಪ್ರತಿ ಮನೆಯಲ್ಲೂ ಇರುತ್ತದೆ. ತುಂಬಾ ಪ್ರಯೋಜನಕಾರಿ ಬಾಳೆ ಹಣ್ಣನ್ನು ನೀವು ರುಚಿಕರವಾದ ಸಿಹಿ ಮತ್ತು ಖಾರದ ಭಕ್ಷ್ಯ ಅಥವಾ ಜ್ಯೂಸ್ ಮಾಡಿ ಸೇವಿಸಬಹುದು.

ಇನ್ನು, ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೇ, ನಿಜವಾದ ವಿಷಯ ಏನೆಂದರೇ, ಬಾಳೆಹಣ್ಣನ್ನು ಸ್ವೀಕರಿಸುವಾಗ ಸಮತೋಲನವನ್ನು ಕಾಪಾಡಿಕೊಂಡರೇ, ದೇಹದ ತೂಕ ಇಳಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.

ಬಾಳೆಹಣ್ಣು ಶೂನ್ಯ ಶೇಕಡಾ ಕೊಬ್ಬನ್ನು ಒಳಗೊಂಡಿರುತ್ತದೆ. ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುವ ಉತ್ತಮ ಕಾರ್ಬ್ಸ್, ಫೈಬರ್ ಮತ್ತು ಪ್ರೋಟೀನ್‌ ಗಳನ್ನು ಒಳಗೊಂಡಿರುತ್ತದೆ. ಡಿಕೆ ಪಬ್ಲಿಷಿಂಗ್ ಹೌಸ್ ಬರೆದ ‘ಹೀಲಿಂಗ್ ಫುಡ್ಸ್’ ಪುಸ್ತಕದ ಪ್ರಕಾರ, ಬಾಳೆಹಣ್ಣಿನಲ್ಲಿ “ತ್ವರಿತವಾಗಿ ಬಿಡುಗಡೆಯಾಗುವ ಗ್ಲೂಕೋಸ್ ಮತ್ತು ನಿಧಾನವಾಗಿ ಬಿಡುಗಡೆ ಫ್ರಕ್ಟೋಸ್” ಇವೆರಡನ್ನೂ ಹೊಂದಿದೆ. ಇವೆರಡನ್ನೂ ಬಾಳೆಹಣ್ಣು ಹೊಂದಿರುವ ಕಾರಣದಿಂದಾಗಿ ದೇಹಕ್ಕೆ ಮತ್ತಷ್ಟು ಶಕ್ತಿಯನ್ನು ನೀಡುತ್ತದೆ

ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು ಏನು..?

ಆಹಾರ ತಜ್ಞ ಮತ್ತು ಪೌಷ್ಟಿಕ ತಜ್ಞ ಡಾ.ಸುನಾಲಿ ಶರ್ಮಾ ಅವರ ಪ್ರಕಾರ ಬಾಳೆಹಣ್ಣಿನಲ್ಲಿ ಕೇವಲ 105 ಕ್ಯಾಲೊರಿಗಳಿವೆ, ಆದ್ದರಿಂದ ಇದು ತೂಕವನ್ನು ಹೆಚ್ಚಿಸಲು ಮತ್ತು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಇದು ಸೇವಿಸುವ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ.

“ದಿನಕ್ಕೆ ಒಂದು ಮಧ್ಯಮ ಗಾತ್ರದ ಅಥವಾ 5 ಇಂಚಿನ ಬಾಳೆಹಣ್ಣನ್ನು ಮಾತ್ರ ತಿನ್ನುವುದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಇದನ್ನು ಪೂರ್ವಭಾವಿ ಅಥವಾ ತಾಲೀಮು ನಂತರದ ಆಹಾರವಾಗಿ ಸೇವಿಸಬೇಕು. ಏಕೆಂದರೆ ಕಠಿಣ ದೈಹಿಕ ವ್ಯಾಯಾಮದ ನಂತರ ದೇಹವನ್ನು ಸಮಸ್ಥಿತಿಗೆ ತರಲು ಸಹಾಯ ಮಾಡುತ್ತದೆ.

ಆರೋಗ್ಯಕರವಾದ ರೀತಿಯಲ್ಲಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ರುಚಿಕರವಾದ ಬಾಳೆಹಣ್ಣಿನ ಆಧಾರಿತ ಪಾನೀಯ ವಿಧಾನಗಳನ್ನು ನಾವು ನಿಮಗೆ ಈ ಕೆಳಗೆ ವಿವರಿಸಿದ್ದೇವೆ.

ಐದು ಬಾಳೆಹಣ್ಣಿನ ಸ್ಮೂಥೀಸ್

*ಬನಾನ ವಾಲ್ನಟ್ ಸ್ಮೂಥಿ

ಬಾಳೆಹಣ್ಣಿನ ವಾಲ್ನಟ್ ಸ್ಮೂಥಿ ನಿಮ್ಮ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಬೆಳಗ್ಗೆ ಉಪಹಾರದೊಂದಿಗೆ ಅಥವಾ ಮಧ್ಯಾಹ್ನದ ಊಟದೊಂದಿಗೆ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸುತ್ತದೆ.

*ಬನಾನ ಬಾದಾಮ್ ಶೇಕ್

ಬಾಳೆಹಣ್ಣು ಪೊಟ್ಯಾಸಿಯಂ, ಆ್ಯಂಟಿ ಆಕ್ಸಿಡೆಂಟ್, ಕಬ್ಬಿಣಾಂಶ, ಮತ್ತು ಹಲವು ಮಿನರಲ್ ಅಂಶವನ್ನು ಕೂಡಿರುತ್ತದೆ. ಬಾಳೆಹಣ್ಣನ್ನು ಬಾದಾಮಿಯೊಂದಿಗೆ ಸೇರಿಸಿ ಜ್ಯೂಸ್ ಮಾಡಿ ಕುಡಿದರೇ ಆರೋಗ್ಯಕ್ಕೆ ಪ್ರಯೋಜನಕಾರಿ.

*ಬೆರ್ರಿ ಮಿಶ್ರಿತ ಬಾಳೆಹಣ್ಣಿನ ಜ್ಯೂಸ್

ಯಾರು ಕಲರ್ ಫುಲ್, ಮೈಂಡ್ ಫುಲ್ ಡ್ರಿಂಕಿಂಗ್ ಮಾಡುತ್ತಾರೋ ಅವರಿಗೆ ಈ ಜ್ಯೂಸ್ ಇಷ್ಟವಾಗುತ್ತದೆ. ಇದು ಆರೋಗ್ಯಕರ ಹಣ್ಣುಗಳ ರುಚಿಕರ ಮಿಶ್ರಣವಾಗಿರುವುದರಿಂದ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗುತ್ತದೆ.

*ಮಸಾಲೆ ಮಿಶ್ರಿತ ಬಾಳೆಹಣ್ಣಿನ ಜ್ಯೂಸ್

ಕ್ಲಾಸಿಕ್ ಪಾನೀಯಕ್ಕೆ ಕೆಲವು ರುಚಿಗಳನ್ನು ಸೇರಿಸುವುದರಿಂದ ಅದು ಕೆಲವರಿಗೆ ಮತ್ತಷ್ಟು ಇಷ್ಟವಾಗುತ್ತದೆ. ದಾಲ್ಚಿನ್ನಿ, ಲವಂಗ ಮತ್ತು ಕರಿಮೆಣಸು ಒಳಗೊಂಡಿರುವ ಬಾಳೆಹಣ್ಣಿನ ಜ್ಯೂಸ್ ಹೊಟ್ಟೆ ನೋವು, ಅಜೀರ್ಣಕ್ಕೆ ಸಿದ್ಧೌಷಧಿ. *ಬನಾನ ಓಟ್ಸ್ ಸ್ಮೂಥಿಬಾಳೆಹಣ್ಣು, ಓಟ್ಸ್, ಅರಿಶಿನ, ದಾಲ್ಚಿನ್ನಿ, ಶುಂಠಿ ಮಿಶ್ರಿತ ಜ್ಯೂಸ್ ಸೇವಿಸುವುದರಿಂದ ನಿಮ್ಮನ್ನು ದೀರ್ಘಕಾಲದ ತನಕ ಆರೋಗ್ಯವಾಗಿರಿಸುತ್ತದೆ.

About The Author

Leave a Reply

Your email address will not be published. Required fields are marked *