May 5, 2024

Chitradurga hoysala

Kannada news portal

ಸೋಮವಾರ ಜೆಡಿಎಸ್ ಪ್ರತಿಭಟನೆ* ಹೊಳಲ್ಕೆರೆ

1 min read
ಸೋಮವಾರ ಜೆಡಿಎಸ್ ಪ್ರತಿಭಟನೆ* _ಹೊಳಲ್ಕೆರೆ

*ಸೋಮವಾರ ಜೆಡಿಎಸ್ ಪ್ರತಿಭಟನೆ* _________________ಹೊಳಲ್ಕೆರೆ : ತಾಲ್ಲೂಕು ಜೆಡಿಎಸ್ ಘಟಕವು, ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಸೋಮವಾರ ಹಮ್ಮಿಕೊಂಡಿದೆ . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡಲು ಹೊರಟಿರುವುದು ಖಂಡನೀಯವಾಗಿದೆ.ಈ ಎರಡೂ ಸರಕಾರಗಳ ಲಜ್ಜೆಗೆಟ್ಟ ಜನವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ ಜುಲೈ 5 ಸೋಮವಾರ ಹೊಳಲ್ಕೆರೆ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಎಲ್ಲ ಘಟಕಗಳ ಮುಖಂಡರು ಕಾರ್ಯಕರ್ತರು ಬೆಳಿಗ್ಗೆ ೧೧ ಗಂಟೆಗೆ ಪ್ರವಾಸಿ ಮಂದಿರದಲ್ಲಿ ಸೇರುವ ಮೂಲಕ ಅಲ್ಲಿಂದ ಪ್ರತಿಭಟನೆಯನ್ನು ಹೊಳಲ್ಕೆರೆ ತಹಶೀಲ್ದಾರ್ ಅವರ ಕಚೇರಿಗೆ ಹೋಗಿ ಪ್ರತಿಭಟನಾ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *