May 2, 2024

Chitradurga hoysala

Kannada news portal

ತಾಲ್ಲೂಕು , ಜಿಲ್ಲಾ ಪಂಚಾಯಿತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ , ಕೆ.ಪಿ.ಸಿ.ಸಿ ಮಾಧ್ಯಮ ವಕ್ತರಾದ ಬಾಲಕೃಷ್ಣಸ್ವಾಮಿಯಾದವ್

1 min read

ತಾಲ್ಲೂಕು , ಜಿಲ್ಲಾ ಪಂಚಾಯಿತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ , ಕೆ.ಪಿ.ಸಿ.ಸಿ ಮಾಧ್ಯಮ ವಕ್ತರಾದ ಬಾಲಕೃಷ್ಣಸ್ವಾಮಿಯಾದವ್

ಈ ಬರುವಂತಹ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೆ.ಪಿ.ಸಿ.ಸಿ ಮಾಧ್ಯಮ ವಕ್ತರಾದ ಬಾಲಕೃಷ್ಣಸ್ವಾಮಿಯಾದವ್ ಭವಿಷ್ಯ ನುಡಿದರು.

ನಾಯಕನಹಟ್ಟಿ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮಕ್ಕೆ ಆಗಮಿಸಿ ಸುದ್ದಿಗೊಷ್ಠಿಯೊಂದಿಗೆ ಮಾತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಬಿಜೆಪಿ ದೂಳಿಪಟವಾಗಲಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಅವರದ್ದು ಯಾವಾಗಲೂ ಒಂದೇ ಜಪಾ 50 ವರ್ಷದಲ್ಲಿ ಮಾಡದ ಸಾಧನೆ ನಾವು ಮಾಡಿದ್ದಿವಿ ಅನ್ನುತ್ತಾರೆ. ಆದರೆ ಇವತ್ತು ಬಿಜೆಪಿಯ ಅವರ ಮಾತು ಒಪ್ಪಬೇಕಾಗಿದೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಇಷ್ಟೊಂದು ನಿರುದ್ಯೋಗ ಇರಲಿಲ್ಲ ಬಡತನ ತಡವಾಡುತ್ತಿರಲಿಲ್ಲ. ಕೇಂದ್ರ ಸರ್ಕಾರದ ಜನ ಸಾಮಾನ್ಯರನ್ನು ತೀರ್ವ ಸಂಕಷ್ಟಕ್ಕೆ ಸಲ್ಲಿದೆ ತೈಲ ದರ ಏರಿಕೆ ಹೊಡೆತ ಎಲ್ಲಾ ವ್ಯಾಪಾರದ ಮೇಲೆ ಬಿದ್ದಿದೆ. ಸಾರಿಗೆ, ಆಟೋ ಮೊಬೈಲ್ಸ್ ಅಗತ್ಯ ಸರಕುಗಳ ಬೇಲೆ ಹೆಚ್ಚಲಿದೆ.

ಆಗ ಇದರ ಹೊರೆ ಶ್ರೀಸಾಮಾನ್ಯರೆ ಹೊರ ಬೇಕ, ಒಂದು ಕಡೆ ಕೇಂದ್ರ ಸರ್ಕಾರದ ದೋರಣೆಯಿಂದ ಹಾಗು ಕೋರೊನ ಹೊಡೆತದಿಂದ ಹಾಗೂ ಜನರ ಆದಾಯ ಕಡಿಮೆಯಾಗಿದೆ ಎಂದರು. ಪೆಟ್ರೋಲ್ ಡೀಸೆಲ್ ದೇಶದ ಇತಿಹಾಸದಲ್ಲಿ ಕಂಡರೆಯದ ರೀತಿಯಲ್ಲಿ ಏರಿಕೆಯಾಗಿದೆ. ದಶಕದ ಗಡಿಯನ್ನು ದಾಟಿದ್ದು. ಯಾರು ಮಾಡದ ಸಾಧನೆಯನ್ನು ಪ್ರಾಧನಿ ನರೇಂದ್ರ ಮೊದಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರ ದಿವಾಳಿ ಹಂಚಿಗೆ ಇಂದು ಕಿಡಿಕಾರಿದ ಅವರು ಮಾಜಿ ಪ್ರಧಾನ ಮಂತ್ರಿ ಡಾ||ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೊಲ್ ಬೆಲೆ 9.20 ಪೈಸೆ ತೆರಿಗೆ ಇತ್ತು. ಇಂದು ಪ್ರಧಾನಿ ಮೋದಿ 32.90 ರೂಪಾಯಿ ತೆರಿಗೆ ಹೆಚ್ಚಳ ಮಾಡಿದ್ದಾರೆ ಎಂದು ಹೇಳಿದರು.

ಕಳೇದ 7 ವರ್ಷಗಳಿಂದಲೂ ಹಿಂದೆಂದೂ ಕಂಡಿಲ್ಲದ ವಿನಾಶ ಜವಬ್ದಾರಿಯಿಂದ ನುಣಿಚಿಕೊಳ್ಳುವುದು ಭಾರತದ ಜನರನ್ನು ತ್ಯಜಿಸುವ ಕಥೆಯಾಗಿದೆ. ಈ ಸರ್ಕಾರವು ಜನರ ನಂಬಿಕೆಗೆ ದ್ರೋಹ ಬಗೆದ ಕಾರಣ ದೇಶಕ್ಕೆ ಹಾನಿಕರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನರು ಇಟ್ಟಿರು ನಂಬಿಕೆ ಮತ್ತು ಸಹಜ ವಿಶ್ವಾಸಕ್ಕೆ ದ್ರೋಹ ಬಗೆದಿದೆ ಎಂದು ಹೇಳಿದರು.
ಅಸಂಖ್ಯಾತ ಭರವಸೆಗಳ ಮೇಲೆ ಜನರ ಆಯ್ಕೆ ಮಾಡಿದ ಸರ್ಕಾರವು 140 ಕೋಟಿ ಭಾರತೀಯರ ಮೇಲೆ ಮಾಡಿದ ಕೆಟ್ಟ ರೀತಿಯ ವಂಚನೆಯಾಗಿದೆ. 7 ವರ್ಷಗಳ ನಂತರ ಸರ್ಕಾರದ ಸಾಧನೆಯನ್ನು ಪರಿಶೀಲಿಸುವ ಸಮಯ ಬಂದಿದೆ. ದೇಶವು ಏಕೆ ಬಳಲುತ್ತಿದೆ ಎಂದು ಕೇಳುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಕೋವಿಡ್-19 ವಿರುದ್ದ ಹೋರಾಡಲು ಸರಿಯಾದ ಬದ್ದತೆ ನೀತಿ ಮತ್ತು ನಿರ್ಣಯ ಕೈಗೊಳ್ಳುವ ಅಗತ್ಯವಿದೆ. ತಿಂಗಳಿಗೊಮ್ಮೆ ಮಾತುಕಥೆಯನ್ನಾಡುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವರದಿ –
ಹರೀಶ್ ನಾಯಕನಹಟ್ಟಿ

About The Author

Leave a Reply

Your email address will not be published. Required fields are marked *