May 15, 2024

Chitradurga hoysala

Kannada news portal

LIC ಪಕ್ಕ ವೀಡಿಯೂ ಹೆಚ್ಚು ವೈರಲ್ , ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕಲ್ಯಾಣಿ ಸ್ವಹ್ಚತೆ

1 min read

LIC ಪಕ್ಕ ವೀಡಿಯೂ ಹೆಚ್ಚು ವೈರಲ್ , ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕಲ್ಯಾಣಿ ಸ್ವಹ್ಚತೆ

ಭೀಮ್ ಆರ್ಮಿ ಚಿತ್ರದುರ್ಗ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಅವಿನಾಶ್ ಸಿಎಲ್ ರವರು ಕಳೆದ ನಾಲ್ಕೈದು ದಿನಗಳ ಹಿಂದೆ ನಗರದ ಎಲ್ಐಸಿ ಆಫೀಸ್ ಪಕ್ಕದಲ್ಲಿರುವ ಹಳೇಕಾಲದ ಕಲ್ಯಾಣಿಯೊಂದು ಕಸಕಡ್ಡಿ, ವಿಷಪೂರಿತ ಹುಲ್ಲುಗಳು ಹಾಗೂ ಜನರು ಎಸೆಯುವ ತ್ಯಾಜ್ಯ ವಸ್ತುಗಳಿಂದ ತುಂಬಿ ಹಾಳಾಗುತ್ತಿರುವುದನ್ನು ಕಂಡು, ತಮ್ಮ ಫೇಸ್ ಬುಕ್ ಲೈವ್ ವೀಡಿಯೋ ಮುಖಾಂತರ ಚಿತ್ರದುರ್ಗದ ಜನರಿಗೆ ಅಧಿಕಾರಿಗಳಿಗೆ ತಲುಪಿಸುವಂತಹ ಕೆಲಸ ಮಾಡಿದ್ದರು. ಆ ವಿಡಿಯೋ ಅತಿ ಹೆಚ್ಚು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಇಂದು ಕಲ್ಯಾಣಿಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ .

ಜನ ಸಾಮಾನ್ಯರು ಹೇಳುವವರೆಗೂ ಎಚ್ಚರ ವಹಿಸದ ಅಧಿಕಾರಿಗಳ ಮೇಲೆ ಬೇಸರವಿದೆ. ಚಿತ್ರದುರ್ಗ ಪುರಾತನ ಕಣಿವೆಗಳು ಕಟ್ಟಡಗಳು ಕಲ್ಯಾಣಿಗಳು ಹಾಗೂ ಏಳುಸುತ್ತಿನಕೋಟೆ ಯಿಂದಲೇ ಪ್ರಸಿದ್ಧಿಯಾಗಿರುವ ವಿಷಯ ಅಧಿಕಾರಿಗಳು ಮರೆತಂತಿದೆ. ಎಲ್ಲಾ ಹಳೆಯ ಕಾಲದ ಜಾಗಗಳನ್ನು ಜೋಪಾನ ಮಾಡಿ ಮುಂದಿನ ಪೀಳಿಗೆಗೆ ತಲುಪಿಸುವುದು ಈಗ ಅಧಿಕಾರಿಗಳ ಕರ್ತವ್ಯವಾಗಿದೆ. ಚಿತ್ರದುರ್ಗದಲ್ಲಿ ಅಧಿಕಾರಿಗಳು ಈ ಕಾರ್ಯದಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಹಳೆಯ ಕಾಲದ ಯಾವುದೇ ಜಾಗ ವಾಗಲಿ ವಸ್ತುವಾಗಲಿ ಹಾಳಾಗುತ್ತಿರುವುದು ಕಂಡುಬಂದಲ್ಲಿ ತಕ್ಷಣ ನಿಮ್ಮ ನಗರಸಭೆಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಜಿಲ್ಲಾಧ್ಯಕ್ಷರಾದ ಅವಿನಾಶ್ ಸಿ ಎಲ್ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬ ನಾಗರಿಕರು ಈ ರೀತಿಯಾದಂತಹ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ನಮ್ಮ ಪತ್ರಿಕೆ ಮುಖಾಂತರ ಕೇಳಿಕೊಳ್ಳುತ್ತಿದ್ದೇವೆ. ಭೀಮ್ ಆರ್ಮಿ ಚಿತ್ರದುರ್ಗ ಜಿಲ್ಲಾ ಸಮಿತಿಯು ಚಿತ್ರದುರ್ಗ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಅತಿ ಖುಷಿಯ ವಿಚಾರವಾಗಿದೆ.

About The Author

Leave a Reply

Your email address will not be published. Required fields are marked *