April 29, 2024

Chitradurga hoysala

Kannada news portal

*ಪತ್ರಕರ್ತರು ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಮುದ್ರಣ ಮಾಧ್ಯಮ ಸಂಕಷ್ಟದ ಹಾದಿಯಲ್ಲಿದೆ, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ*

1 min read

*ಪತ್ರಕರ್ತರು ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಮುದ್ರಣ ಮಾಧ್ಯಮ ಸಂಕಷ್ಟದ ಹಾದಿಯಲ್ಲಿದೆ, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ*

ಬಳ್ಳಾರಿ: ಈ ಮೊದಲು ಪತ್ರಿಕಾ ರಂಗ ಅನ್ನುವುದು ಸರ್ಕಾರದ ಆಡಳಿತ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಮಾಲೀಕರ ಆಣತಿಯಂತೆ ಪತ್ರಿಕೋದ್ಯಮ ನಡೆಸಿ ಸಾಗುತ್ತಿರುವುದು ದೊಡ್ಡ ದುರಂತ ಎಂದು ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಹೇಳಿದರು.

ಕಾನಾಮಡುಗು ದಾಸೋಹ ಮಠದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೂಡ್ಲಿಗಿ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತರು ಪತ್ರಿಕೋದ್ಯಮದ ಬರವಣಿಗೆಯ ಜೊತೆಗೆ ಹೋರಾಟದ ಮನೋಭಾವನೆಯನ್ನು ಮೂಡಿಸಿಕೊಡು ನೊಂದವರ ಪರವಾದ ಬರವಣಿಗೆಯ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಬೇಕಿದೆ. ಅಲ್ಲದೆ, ಪತ್ರಕರ್ತರಾದವರು ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಮುದ್ರಣ ಮಾಧ್ಯಮವು ಸಂಕಷ್ಟದ ಹಾದಿಯಲ್ಲಿದ್ದು, ಪತ್ರಕರ್ತರ ಸ್ಥಿತಿಯೂ,ಸೋಚನಿಯಾ ಭಿನ್ನವಾಗಿಲ್ಲ. ಗ್ರಾಮೀಣ ಮಟ್ಟದ ಪತ್ರಕರ್ತರು ಅವರ ವರದಿಗಾರಿಕೆ ವೃತ್ತಿಯ ಜೊತೆಗೆ ಕುಟುಂಬ ನಿರ್ವಹಣೆಗೆ ಇತರೆ ಆದಾಯ ಮೂಲದ ಕಾಯಕವನ್ನು ನಂಬಿಕೊಳ್ಳುವಂಥ ಪರಿಸ್ಥಿತಿ ತಲುಪಿದೆ ಎಂದುರು.

About The Author

Leave a Reply

Your email address will not be published. Required fields are marked *