May 4, 2024

Chitradurga hoysala

Kannada news portal

ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ ಆರ್ಥಿಕ ನೆರವು : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

1 min read

ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ

ಚಿತ್ರದುರ್ಗ,ಆಗಸ್ಟ್11:
ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದಾಗಿ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಕ್ಕೆ ಸೇರಿದ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ್ದಲ್ಲಿ ಪ್ರತಿಯೊಂದು ಕುಟುಂಬಕ್ಕೆ ರೂ.1.00(ಒಂದು ಲಕ್ಷಗಳ) ಆರ್ಥಿಕ ನೆರವನ್ನು ನೀಡಲು ಘೋಷಿಸಲಾಗಿರುತ್ತದೆ.
ಅರ್ಜಿದಾರರು ಪರಿಹಾರವನ್ನು ಪಡೆಯಲು ತಮ್ಮ ವ್ಯಾಪ್ತಿಯ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆ-1 ರಲ್ಲಿ ಮಾಹಿತಿ ಹಾಗೂ ನಮೂನೆ-2 ಹಾಗೂ ನಮೂನೆ-3 ರಲ್ಲಿ ಅರ್ಜಿದಾರರಿಂದ ಸ್ವಯಂ ಘೋಷಣಾ ಹಾಗೂ ನಿರಾಕ್ಷೇಪಣಾ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ಕಚೇರಿಗೆ ಸಲ್ಲಿಸಬೇಕು.
ದಾಖಲಾತಿಗಳು: ಅರ್ಜಿದಾರರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು. ಕೋವಿಡ್-19 ವೈರಾಣು ಸೋಂಕಿನಿಂದ ಮೃತ ಪಟ್ಟಿದಕ್ಕೆ ಸಂಬಂಧಿಸಿದಂತೆ, ಕೋವಿಡ್-19 ಪಾಸಿಟಿವ್ ರೀಪೋರ್ಟ್ (ಅಧಿಕೃತವಾಗಿ ಗುರುತಿಸಿದ ಪ್ರಯೋಗಲಾಯದಿಂದ ಪಡೆದಿರುವ) ಪಿ ನಂಬರ್ ( patient Number ) ಕೋವಿಡ್ ದೃಢಪಟ್ಟ ರೋಗಿ ಸಂಖ್ಯೆ ಈ ದಾಖಲೆಗಳನ್ನು ಆರ್ಹತೆ ಪಡೆದ ವೈದ್ಯರಿಂದ ದೃಢಿಕರಿಸಿ ಸಲ್ಲಿಸುವುದು ಅಥವಾ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು (ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಇರುವ ಯಾವುದೇ ಶಂಕಿತ ಪ್ರಕರಣಗಳಲ್ಲಿ ಕ್ಲಿನಿಕೊರಾಡಿಯಾಲಾಜಿಕಲ್ ಸಾಕ್ಷ್ಯಗಳು ಮತ್ತು ಇತರೆ ಪ್ರಯೋಗಾಲಯ ಮೌಲ್ಯಗಳು ಕೋವಿಡ್-19 ಪ್ರಕರಣಗಳನ್ನು ಸೂಚಿಸಿರುವುದರಲ್ಲಿ “ಪಿ” ಸಂಖ್ಯೆ ಹೊಂದಿ ವೈದ್ಯಾಧಿಕಾರಿಗಳಿಂದ ಪ್ರಮಾಣೀಕೃತವಾದಂತಹ ಪ್ರಕರಣಗಳು). ಕ್ಲೀನಿಕಲ್ ರೇಡಿಯಾಲಜಿ ಮತ್ತು ಇತರೆ ಸಂಬಂಧಿಸಿದ ಪ್ರಯೋಗಾಲಯ ವರದಿ ಈ ದಾಖಲೆಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳಿಂದ ದೃಢೀಕರಿಸಿ ಪಡೆದು ಸಲ್ಲಿಸುವುದು. ಮೃತ ಪಟ್ಟವರ ಆಧಾರ್ ಕಾರ್ಡ್ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಚೇರಿ, ನಾಡ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *