May 18, 2024

Chitradurga hoysala

Kannada news portal

ಕುಂಚಿಗನಹಾಳ್ ಅಕಮ ಕಲ್ಲುಗಣಿಗಾರಿಕೆ ನಿಲ್ಲಿಸಿ :ಡಿ.ಸಿ ಗೆ ವಕೀಲ ಪತಾಪ್‍ಜೋಗಿ ಒತಾಯ

1 min read

ಕುಂಚಿಗನಹಾಳ್ ಅಕಮ ಕಲ್ಲುಗಣಿಗಾರಿಕೆ ನಿಲ್ಲಿಸಿ ಡಿ.ಸಿ ಗೆ ವಕೀಲ ಪತಾಪ್‍ಜೋಗಿ ಒತಾಯ

 

ಚಿತ್ರದುರ್ಗ ●ತಾಲ್ಲೂಕಿನ ಕಸಬಾ ಹೋಬಳಿ ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಂಚಿಗನಹಾಳ್ ರಿ.ಸ.ನಂ.44 ರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಪಿ.ಎನ್‍.ಸಿ.ಕಂಪನಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಯುವ ವಕೀಲ ಪ್ರತಾಪ್‍ಜೋಗಿ ಒತ್ತಾಯಿಸಿದರು.ಕುಂಚಿಗನಹಾಳ್ ಬಳಿಯಿರುವ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರು ವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 40 ಎಕರೆ ಗೋಮಾಳದಲ್ಲಿ 10 ಎಕರೆಯನ್ನು ಸಮತಟ್ಟು ಮಾಡುವಂತೆ ಪಿ.ಎನ್‍.ಸಿ.ಕಂಪನಿಗೆ ವಹಿಸಲಾಗಿತ್ತು.

ಆದರೆ ಈ ಕಂಪನಿ 40 ಎಕರೆ ಗೋಮಾಳ ಜಾಗವನ್ನು ಸಮತಟ್ಟು ಮಾಡಲು ಹೊರಟಿದ್ದು, ಅಲ್ಲಿ ಸಿಗುವ ಮಣ್ಣು ಮತ್ತು ಜಲ್ಲಿ ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ಹೈಕೋಟ್ರ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಕಲ್ಲುಗಣಿಗಾರಿಕೆ ಕಂಡು ಬಂದಲ್ಲಿ ಪಿ.ಎನ್‍.ಸಿ.ಕಂಪನಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಕೋರ್ಟ್ ಡಿಸಿಗೆ ಆದೇಶಿಸಿದೆ ಎಂದರು. ವಿದ್ಯಾರ್ಥಿನಿಲಯವಿದ್ದು, ಕಲ್ಲುಗಳನ್ನು ಸ್ಪೋಟಿಸುವುದರಿಂದ ಕಟ್ಟಡಕ್ಕೆ ಹಾನಿಹಾಗುವುದಲ್ಲದೆ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಧಕ್ಕೆಯಾಗಲಿದೆಯಲ್ಲದೆ ರೈತರ ಬೆಳೆಗಳ ಮೇಲೆ ಧೂಳು ಮುತ್ತಿಕೊಂಡಿದೆ ಕೂಡಲೆ ಪಿ.ಎನ್‍.ಸಿ.ಕಂಪನಿಯ ಪರವಾನಗಿಯನ್ನು ರದ್ದುಪಡಿಸಿ ಇಟಾಚಿ, ಟಿಪ್ಪರ್, ಜೆಸಿಬಿ.ಇವುಗಳನ್ನು ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಸಾವಿರಾರು ಲೋಡ್ ಮಣ್ಣು ಮತ್ತು ಕಲ್ಲುಗಳನ್ನ ಹೊರಗೆ ಸಾಗಿಸುತ್ತಿರುವುದರಿಂದ ಸರ್ಕಾರಕ್ಕೆ ಅಂದಾಜು ನಲವತ್ತರಿಂದ ಐವತ್ತು ಕೋಟಿ ರೂ.ನಷ್ಟ ಉಂಟಾಗಿದ್ದು, ಪಿ.ಎನ್‍.ಸಿ.ಕಂಪನಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ನಷ್ಟವನ್ನು ತುಂಬಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ವಿನಂತಿಸಿದರು.ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶಿರುವಲ್ಲಪ್ಪ ಮಾತನಾಡಿ ಬಳ್ಳಾರಿಯನ್ನು ಮೀರಿಸುವಂತೆ ಅಕ್ರಮ ಕಲ್ಲುಗಣಿಗಾರಿಕೆ ಇಲ್ಲಿ ನಡೆಯುತ್ತಿದ್ದರೂ ಅಧಿಕಾರಿಗಳು ಏಕೆ ಮೌನವಹಿಸಿದ್ದಾರೆಂಬುದು ಗೊತ್ತಾಗುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೇವಲ ಹತ್ತು ಎಕರೆ ಗೋಮಾಳ ಜಾಗವನ್ನು ಮಾತ್ರ ಸಮತಟ್ಟು ಮಾಡಬೇಕಿತ್ತು. ಪಿ.ಎನ್‍.ಸಿ.ಕಂಪನಿಯವರು ಇಡೀ ಗೋಮಾಳದ ಜಾಗವನ್ನೆಲ್ಲಾ ಸಮತಟ್ಟು ಮಾಡುತ್ತಿದ್ದು, ಇಲ್ಲಿನ ಮಣ್ಣು ಮತ್ತು ಗುಣಮಟ್ಟದ ಕಲ್ಲುಗಳನ್ನು ಲೋಡ್‍ಗಟ್ಟಲೆ ಹೊರಗಡೆ ಸಾಗಿಸುತ್ತಿದ್ದಾರೆ.

ಪ್ರಕೃತಿ ಸಂಪತ್ತನ್ನು ಉಳಿಸುವಂತೆ ನಾವುಗಳು ಹೈಕೋಟ್ರ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಪಿ.ಎನ್‍.ಸಿ.ಕಂಪನಿ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದೆ. ಅದರಂತೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್‍ನಾಯ್ಕ, ಸತೀಶ್ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

About The Author

Leave a Reply

Your email address will not be published. Required fields are marked *