April 27, 2024

Chitradurga hoysala

Kannada news portal

ನಗರದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನೆ

1 min read

ನಗರದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನೆ

ಹಿರಿಯೂರು:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ, ಪೆಟ್ರೋಲ್, ಡೀಸಲ್, ಗ್ಯಾಸ್ ಮತ್ತು ದಿನಬಳಿಕೆ ಪದಾರ್ಥಗಳ ಬೆಲೆ ಏರಿಕೆ ವಿರುದ್ಧ ಹಿರಿಯೂರು ತಾಲೂಕು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಮಾಜಿ ಸಚಿವ ಡಿ.ಸುಧಾಕರ್ ರವರ ಕಛೇರಿಯಿಂದ ನಗರದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನೆ ಮುಖಾಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮಾರ್ಗ ಮಧ್ಯದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾ ನಿರತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಹಿರಿಯೂರು ತಾಲ್ಲೂಕು ದಂಡಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಪ್ರಸಾದ್ ಮಾತನಾಡಿ ಇಡೀ ದೇಶದ ಜನತೆ ಮಾಜಿ ಪ್ರಧಾನಿ ಮನಮೋಹನಸಿಂಗ್ ರವರನ್ನು ನೆನೆಯಬೇಕು. ಯಾಕೆಂದರೆ ಅವರು ಉತ್ತಮ ಆರ್ಥಿಕ ತಜ್ಞರಾದ ಕಾರಣ ದೇಶವನ್ನು ಸಮತೋಲನವಾಗಿ ನಡೆಸಿಕೊಂಡು ಬಂದಿರುತ್ತಾರೆ. ಈಗಿನ ಬಿ.ಜೆ.ಪಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಬಡವರ ಹಾಗೂ ಮಧ್ಯಮ ವರ್ಗದ ವಿರೋಧಿ ಸರ್ಕಾರವಾಗಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿಯವರು ಅಂತರಾಷ್ಟ್ರಮಟ್ಟದಲ್ಲಿ ತೈಲಬೆಲೆ ಕುಸಿದಿದ್ದರೂ ಇಂಧನ ಬೆಲೆ ಇಳಿಕೆ ಮಾಡದೆ ಕೇಂದ್ರ ತೆರಿಗೆ ಹಾಗೂ ರಾಜ್ಯ ತೆರಿಗೆ ನೆಪದಲ್ಲಿ ಸಾರ್ವಜನಿಕರನ್ನು ಹಗಲು ದರೋಡೆ ಮಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದರು.

ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಕೊಟ್ಟಿದ್ದ ಮೋದಿಯವರು ಯುವಕರಿಗೆ ಪಕೋಡ ಮಾರಲು ಹೇಳಿದ್ದರು. ಈಗ ಪಕೋಡ ಮಾಡುವ ತೈಲದ ಬೆಲೆ ಏರಿಕೆ ಮಾಡಿರುತ್ತಾರೆ. ಅನಿಲ ಭಾಗ್ಯಯೋಜನೆಯಡಿ ಬಡವರಿಗೆ ಉಚಿತವಾಗಿ ಗ್ಯಾಸ್ ನೀಡಿ ಈಗ ಅಡುಗೆ ಅನಿಲದ ಬೆಲೆ ಒಂದು ಸಾವಿರದತ್ತ ಕೊಂಡೊಯ್ಯುತ್ತಿದ್ದಾರೆ. ಬಡವರ ಜೇಬಿನಿಂದ ಲೂಟಿ ಮಾಡಿ ಶ್ರೀಮತರ ಜೇಬು ತುಂಬಿಸುತ್ತಿದ್ದಾರೆ. ಬಡವರ ಮತ್ತು ಮಧ್ಯಮ ವರ್ಗದವರ ಸ್ಥಿತಿ ಬಹಳ ಗಂಬೀರವಾಗಿದ್ದು, ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ ಸರ್ಕಾರಗಳು ಈ ಬೆಲೆ ಏರಿಕೆಗಳನ್ನು ಕಡಿಮೆ ಮಾಡಬೇಕು ಇಲ್ಲವಾದಲ್ಲಿ ದೇಶದ ಜನತೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುವರು ಎಂದು ಎಚ್ಚರಿಸಿದರು.
ಗ್ರಾಮಾಂತರ ಅಧ್ಯಕ್ಷ ಸಿದ್ದೇಶ್ (ಎಂ.ಡಿ.ಕೋಟೆ), ಯುವ ಮುಖಂಡರಾದ ಪ್ರದೀಪ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಹೀದ್, ಮನೋಜ್ ಪಾಳೇಗಾರ್, ವಿಜಯಕುಮಾರ್, ಸೋಮಶೇಖರ್, ಪ್ರದೀಪ್, ರಘು ರಾಯಣ್ಣ, ಅವಿನಾಶ್, ಕಾರ್ತಿಕ್, ದೇವೇಗೌಡ, ಸರ್ವೇಶ್, ದಯಾನಂದ, ರವಿ, ಗೌಡ, ಗಿರೀಶ್, ದಿಲೀಪ್, ಚಂದ್ರು, ರಘು ಅಜ್ಜಪ್ಪ, ರಕ್ಷಿತ್, ದರ್ಶನ್, ನವೀನ್, ತಬ್ಬು, ರವಿಪಾಳೇಗಾರ, ಅರುಣ, ರಮೇಶ್, ಕೋಟಿ, ನಿತಿನ್, ರಾಕಿ, ರೋಬೋ, ಇನ್ನೂ ಹಲವಾರು ಯುವ ಕಾಂಗ್ರೆಸ್ ಮುಖಂಡರು ಉಪಸ್ಥಿತಿರಿದ್ದರು.

About The Author

Leave a Reply

Your email address will not be published. Required fields are marked *