May 2, 2024

Chitradurga hoysala

Kannada news portal

ಶಾಲಾ, ಕಾಲೇಜುಗಳ ಹತ್ತಿರ ತಂಬಾಕು ದಾಳಿ

1 min read

ಶಾಲಾ, ಕಾಲೇಜುಗಳ ಹತ್ತಿರ ತಂಬಾಕು ದಾಳಿ

 

ಚಿತ್ರದುರ್ಗ,ಸೆಪ್ಟೆಂಬರ್21:
ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೋಟ್ಪಾ-2003ರ ಕಾಯ್ದೆಯ ಕುರಿತು ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ, ಧರ್ಮಪುರ, ಗೂಳ್ಯ, ಗೊಲ್ಲರಹಟ್ಟಿ, ಕುರಿದಾಸನಹಟ್ಟಿ ಮತ್ತು ಹರಿಯಬ್ಬೆ ಹಳ್ಳಿಗಳಲ್ಲಿ ಶಾಲಾ, ಕಾಲೇಜುಗಳ ಹತ್ತಿರದ ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಸೋಮವಾರ ದಾಳಿ ನಡೆಸಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದೆ.
ತಂಬಾಕು ಮತ್ತು ಕೊರೋನಾ ಕುರಿತು ಸಾರ್ವಜನಿಕರಲ್ಲಿ ಮತ್ತು ಅಂಗಡಿ ಮಾಲೀಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು.
ಕೋಟ್ಪಾ-2003ರ ಕಾಯ್ದೆಯ ಕುರಿತು ಜಾಗೃತಿ ನೀಡಿ, ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 07 ಕೇಸುಗಳನ್ನು ದಾಖಲಿಸಿ ರೂ. 650 ದಂಡವನ್ನು, ಸೆಕ್ಷನ್-6ಎ ಅಡಿಯಲ್ಲಿ 05 ಕೇಸುಗಳನ್ನು ದಾಖಲಿಸಿ ರೂ. 500 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 11 ಕೇಸುಗಳನ್ನು ದಾಖಲಿಸಿ ರೂ. 2000 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ. ತಿಪ್ಪೇಸ್ವಾಮಿ, ಎ.ಎಸ್.ಐ ಈ. ರಂಗಸ್ವಾಮಿ, ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ಜೆ. ರಂಗಸ್ವಾಮಿ, ಪಿ. ರಮೇಶ್, ಬಿಐಇಆರ್‍ಟಿ ಕೆ. ಬಸವರಾಜ, ಶಿಕ್ಷಕರಾದ ಎಂ.ಬಿ. ಮಂಜುಳಾ, ನಾಗೇಶ್ ಇದ್ದರು.

About The Author

Leave a Reply

Your email address will not be published. Required fields are marked *