May 12, 2024

Chitradurga hoysala

Kannada news portal

ಇಂದು ವಿದ್ಯುತ್ ವ್ಯತ್ಯಯ. ನೀವು ತಿಳಿಯ ಬೇಕೆ

1 min read

ಇಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ,ಅಕ್ಟೋಬರ್08:

220/66/11ಕೆ.ವಿದ್ಯುತ್ ಸ್ವೀಕರಣಾ ಕೇಂದ್ರ, ಚಿತ್ರದುರ್ಗದಲ್ಲಿ ತುರ್ತು ದುರಸ್ತಿ ಕಾಮಗಾರಿ ನಿರ್ವಹಿಸುವುದರಿಂದ ಅಕ್ಟೋಬರ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 66ಕೆವಿ ಹೊರಗೋಗುವ ಮಾರ್ಗಗಳಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಅಡಚಣೆಗೊಳಪಡುವ ಪ್ರದೇಶಗಳು: ಪಂಡರಹಳ್ಳಿ, ಚಿತ್ರದುರ್ಗ, ಹಿರೇಗುಂಟನೂರು, ಭರಮಸಾಗರ, ಸಿರಿಗೆರೆ, ವಿಜಾಪುರ, ಹೆಚ್.ಡಿ.ಪುರ, ಚಿತ್ರಹಳ್ಳಿ, ಹೊಳಲ್ಕೆರೆ, ರಾಮಗಿರಿ, ಬಾಲೇನಹಳ್ಳಿ, ಐಮಂಗಳ, ತುರುವನೂರು, ಮಾಡನಾಯಕನಹಳ್ಳಿ ಹಾಗೂ 220/66/11ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದ 11 ಕೆ.ವಿ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗುವ ಸರಸ್ವತಿ ಪುರಂ, ಟಿಚರ್ಸ್ ಕಾಲೋನಿ, ಜಿಲ್ಲಾಪಂಚಾಯತ್, ಐ.ಯು.ಡಿ.ಪಿ. ಲೇಔಟ್, ಇಂಡಸ್ಟ್ರಿಯಲ್ ಏರಿಯಾ, ಕೋಟೆ, ಕ್ಯಾದಿಗೆರೆ, ಜೆ.ಎನ್.ಕೋಟೆ, ದಂಡಿನಕುರುಬರಹಟ್ಟಿ, ಕಾಸವರಹಟ್ಟಿ, ಪಲ್ಲವಗೆರೆ, ಕೆನ್ನಡಲು, ಸಜ್ಜನಕೆರೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ ಎಂದು ಚಿತ್ರದುರ್ಗ ಕವಿಪ್ರನಿನಿಯ ಕಾರ್ಯನಿರ್ವಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *