May 4, 2024

Chitradurga hoysala

Kannada news portal

ಅಂಬೇಡ್ಕರ್ ಕಂಡಂಥಹ ಬುದ್ಧ ಧಮ್ಮ ಧರ್ಮಕ್ಕೂ ಮತ್ತು ಬುದ್ಧ ಬೋಧಿಸಿದ ಧಮ್ಮಕ್ಕೂ ಇರುವ ವ್ಯತ್ಯಾಸವೇನು ?

1 min read

ಹೊಸದಾಗಿ ಬೌದ್ಧ ಧಮ್ಮ ಸೇರುವವರಿಗಾಗಿ

ಅಂಬೇಡ್ಕರ್ ಕಂಡಂಥಹ ಬುದ್ಧ ಧಮ್ಮ

ಧರ್ಮಕ್ಕೂ ಮತ್ತು ಬುದ್ಧ ಬೋಧಿಸಿದ ಧಮ್ಮಕ್ಕೂ ಇರುವ ವ್ಯತ್ಯಾಸವೇನು ?

ಪ್ರಪಂಚದಲ್ಲಿ ಹಾಗೂ ಸಮಾಜದಲ್ಲಿ ನಮ್ಮ ಸುತ್ತಮುತ್ತಲಿನ ಅನೇಕ ಜನರು ಬೇರೆ ಬೇರೆ ರೀತಿಯ ಧರ್ಮಗಳನ್ನು ಆಚರಿಸುವುದು ನಾವು ನೋಡಿದ್ದೇವೆ .

ಆದರೆ ಗೌತಮ ಬುದ್ಧರು ಬೋಧಿಸಿದ್ದು ಧರ್ಮವಲ್ಲ- ಬದಲಿಗೆ ಅದನ್ನು ಧಮ್ಮ ವೆಂದು ಕರೆದರು .

ಈಗ ಧರ್ಮ ಮತ್ತು ದಮ್ಮದ ವ್ಯತ್ಯಾಸಗಳನ್ನು ನೋಡೋಣ.

ಧರ್ಮ ಎಂದರೇನು ?
ಧರ್ಮದ ಅರ್ಥವನ್ನು ಸಂಕ್ಷಿಪ್ತವಾಗಿ ನೋಡುವುದಾದರೆ, ದೇವರಲ್ಲಿ ನಂಬಿಕೆ , ಆತ್ಮನಲ್ಲಿ ನಂಬಿಕೆ, ದೇವರಪೂಜೆ, ತಪ್ಪುಮಾಡುವ ಆತ್ಮನನ್ನು ಸರಿಪಡಿಸುವುದು, ಪ್ರಾರ್ಥನೆಗಳು, ಧಾರ್ಮಿಕ ಸಮಾರಂಭಗಳು ಮತ್ತು ಬಲಿಗಳ ಮೂಲಕ ದೇವರನ್ನು ಸಂತೃಪ್ತಗೊಳಿಸುವುದು . ಇವುಗಳೆ ಧರ್ಮ ಎಂಬುದಾಗಿ ನೆಲೆನಿಂತಿದೆ .ಧರ್ಮದ ಅರ್ಥವಾಗಿದೆ .

ಈ ಆಚರಣೆಗಳೇ ಧರ್ಮದ ಅರ್ಥವಾಗಿವೆ.

ಧರ್ಮ ಎಂಬ ಪದದ ಅರ್ಥ ಕಾಲ ಕಾಲಕ್ಕೆಹಲವು
ಹಂತಗಳನ್ನು ದಾಟಿ ಬದಲಾಗುತ್ತಾ ಬಂದಿದೆ .

ಧರ್ಮ ಎಂಬ ಪದದ ಅರ್ಥವನ್ನು ಸ್ವಲ್ಪ ವಿವರವಾಗಿ ನೋಡುವುದಾದರೆ — ಧರ್ಮ ಎಂಬುದು ಒ೦ದು ನಿರ್ದಿಷ್ಟ ಅರ್ಥವಿಲ್ಲದ ಒ೦ದು ಅಸ್ಪಷ್ಟ ಪದ . ಅದು ಹಲವು ಅರ್ಥಗಳುಳ್ಳ ಒ೦ದು ಪದ .
ಧರ್ಮವು ಹಲವು ಹಂತಗಳನ್ನು ಹಾದುಬಂದಿರುವುದೇ ಇದಕ್ಕೆ ಕಾರಣ .
ಧರ್ಮ ಎಂಬುದಕ್ಕೆ ಒ೦ದು ಹಂತದಲ್ಲಿರುವ ಅರ್ಥ ಅದರ ಕೆಳಗಿನ ಹಂತದಲ್ಲಿ ಇರಲಿಲ್ಲ ಮತ್ತು ಮುಂದಿನ ಹಂತದಲ್ಲಿಯೂ ಅದಕ್ಕೆ ಅದೇ ಅರ್ಥ ಬರುವ ಸಂಭವ ಕಡಿಮೆ ಇದ್ದಾಗ್ಯೂ , ಆ ಪರಿಕಲ್ಪನೆಗೆ ಪ್ರತಿಯೊಂದು ಹಂತದಲ್ಲಿಯೂ ಧರ್ಮ ಎಂದು ಕರೆಯಲಾಗಿದೆ .

ಧರ್ಮದ ಮೊದಲನೇ ಹಂತದ ವಿಕಾಸ :

ಮಿಂಚು ಮಳೆ ಮತ್ತು ಪ್ರವಾಹ ಗಳಂಥ ಘಟನೆಗಳನ್ನು ವಿವರಿಸಲು ಆದಿಮಾನವನಿಗೆ ಸಾಧ್ಯವಾಗಲಿಲ್ಲ. ಆಗ ಅಂಥ ಘಟನೆಗಳನ್ನು ನಿಯಂತ್ರಿಸಲು ಆಗ ಮನುಷ್ಯನು ಅನುಸರಿಸಿದ ವಿಲಕ್ಷಣ ಆಚರಣೆಗಳಿಗೆ ಮಾಯ -ಮಾಟ ವೆಂದು ಹೆಸರಾಯಿತು .ಆದ್ದರಿಂದ ಧರ್ಮವು ಮಾಯಾಮಾಟದಿಂದ ಅನನ್ಯ ರೂಪ ಪಡೆಯಿತು .ಅಂದರೆ ಮಾಯಾ -ಮಾಟವೇ ಧರ್ಮವೆಂದು ನಂಬಲಾಯಿತು .

ಧರ್ಮದ ಎರಡನೇ ಹಂತದ ವಿಕಾಸ :

ಅಂದರೆ ಪ್ರಕೃತಿಯಲ್ಲಿ ಘಟಿಸುವ ಈ ವಿಲಕ್ಷಣ ಘಟನೆಗಳನ್ನು ನಿಯಂತ್ರಿಸಲು
ಈ ಹಂತಗಳಲ್ಲಿ ನಂಬಿಕೆಗಳು ,ಕರ್ಮಾಚರಣೆಗಳು, ಸಮಾರಂಭಗಳು, ಪ್ರಾರ್ಥನೆಗಳು ಮತ್ತು ಬಲಿಗಳೊಂದಿಗೆ ಧರ್ಮವನ್ನು ಸಮೀಕರಿಸಲಾಯಿತು. ಆಗಲೇ ಧರ್ಮದ ಪರಿಕಲ್ಪನೆಯು ನಿಷ್ಪನ್ನವಾಯಿತು (ಉದಯಿಸಿತ್ತು )ಧರ್ಮ ಎಂಬ ಪದ ಉದಯಿಸಿತು.

ಧರ್ಮದ ಮೂರನೇ ಹಂತದ ವಿಕಾಸ :

ಆದಿಮಾನವನಿಗೆ ತಿಳಿಯದ ಮತ್ತು ಆತನ ತಿಳಿಯಲಾಗದಿದ್ದರೂ ಇಂಥ ಘಟನೆಗಳಿಗೆ ಕಾರಣವಾದಂತಹ ಒ೦ದು ಶಕ್ತಿ ಇದೆ ಎಂಬ ನಂಬಿಕೆಯಿಂದ ಧರ್ಮದ ಆಧಾರವು ಪ್ರಾರಂಭವಾಗುತ್ತದೆ .
ಈ ಹಂತದಲ್ಲಿ ಮಾಯ – ಮಾಟದ ವಾದವು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತದೆ .

ಪ್ರಕೃತಿಯಲ್ಲಿ ಘಟಿಸುವ ವಿಲಕ್ಷಣ ಘಟನೆಗಳು(ಮಿಂಚು ಮಳೆ ಗುಡುಗು ಸಿಡಿಲು ತರಹದ ಘಟನೆಗಳು ) ಮೂಲತಃ ಆ ಶಕ್ತಿಯು ಅಹಿತಕಾರಿ ಆದರೂ ಅದು ಹಿತಕಾರಿಯೂ ಆಗಬಹುದೆಂದು ಜನರು ಭಾವಿಸಲಾರಂಭಿಸಿದರು .

ಧರ್ಮದ ನಾಲ್ಕನೆಯ ಹಂತದ ವಿಕಾಸ :

ಮೇಲಿನಂತೆ ಆ ಹಿತಕಾರಿ ಶಕ್ತಿಯನ್ನು ಜಾಗೃತಗೊಳಿಸಲು ಮತ್ತು ಕೋಪಿಷ್ಟ ಶಕ್ತಿಯನ್ನು ಸಂತೃಪ್ತಪಡಿಸಲು ನಂಬಿಕೆಗಳು ಮತ್ತು ಆಚರಣೆಗಳು ಧಾರ್ಮಿಕ ಸಮಾರಂಭಗಳು ಹಾಗೂ ಬಲಿಗಳು ಅಗತ್ಯವೆನಿಸಿದವು . ಅನಂತರ ಆ ಶಕ್ತಿಯನ್ನು ದೇವರು ಅಥವಾ ಸೃಷ್ಟಿಕರ್ತ ಎಂದು ಕರೆಯಲಾಯಿತು.

ಪ್ರಪಂಚವನ್ನು – ಮನುಷ್ಯನನ್ನು ಸೃಷ್ಟಿಸಿದಾತ ಇದೇ ದೇವರು ಎಂಬ ನಂಬಿಕೆಯ ಹಂತ ವನ್ನು ಮನುಷ್ಯ ತಲುಪಿದನು .
ಅದನ್ನು ಹಿಂಬಾಲಿಸಿ ಮನುಷ್ಯನಿಗೆ ಒ೦ದು ಆತ್ಮವಿದೆ ಆತ್ಮ ಅನಂತ ಮತ್ತು ಈ ಪ್ರಪಂಚದಲ್ಲಿನ ಮನುಷ್ಯನ ವರ್ತನೆಗಳ ಬಗ್ಗೆ ದೇವರಿಗೆ ಉತ್ತರ ಕೊಡಲು ಆತ್ಮನೇ ಹೊಣೆ ಎಂಬ ನಂಬಿಕೆ ಪ್ರಚಲಿತವಾಯಿತು .

:ಸಂಕ್ಷಿಪ್ತವಾಗಿ ಧರ್ಮವೆಂದರೆ :
ದೇವರಲ್ಲಿ ನಂಬಿಕೆ , ಆತ್ಮನಲ್ಲಿ ನಂಬಿಕೆ ,ದೇವರಪೂಜೆ, ತಪ್ಪುಮಾಡುವ ಆತ್ಮವನ್ನು ಸರಿಪಡಿಸುವುದು, ಪ್ರಾರ್ಥನೆಗಳು, ಧಾರ್ಮಿಕ ಸಮಾರಂಭಗಳು ಮತ್ತು ಬಲಿಗಳ ಮೂಲಕ ದೇವರನ್ನು ಸಂತೃಪ್ತಿ ಪಡಿಸುವುದೇ ಧರ್ಮವೆಂದು ನೆಲೆ ನಿಂತಿದೆ. ನಂಬಿಕೆಯಾಗಿದೆ .

ಬುದ್ಧರು ಬೋಧಿಸಿದ ಧಮ್ಮ-ಧರ್ಮದಿಂದ ಹೇಗೆ ಭಿನ್ನವಾಗಿದೆ?

ಧರ್ಮವೆಂದು ಯಾವುದನ್ನು ಕರೆಯಲಾಗುತ್ತದೆಯೋ ಅದು ಬುದ್ಧನು ಬೋಧಿಸಿದ ಧಮ್ಮಕ್ಕಿಂತ ಭಿನ್ನವಾಗಿದೆ.

ಧರ್ಮವು: -ಧರ್ಮವು ವೈಯಕ್ತಿಕವಾದದ್ದು ಮತ್ತು ಅದನ್ನು ಸ್ವಂತಕ್ಕೆ ಸೀಮಿತಗೊಳಿಸಬೇಕು ಎಂದು ಹೇಳಲಾಗಿದೆ .
ಸಾರ್ವಜನಿಕ ಜೀವನದಲ್ಲಿ ಧರ್ಮವು ತನ್ನ ಪಾತ್ರವನ್ನು ನಿರ್ವಹಿಸಲು ಯಾರು ಅವಕಾಶ ನೀಡಕೂಡದು .ಇದು ಧರ್ಮದ ಅರ್ಥವಾಗಿದೆ .

ಬುದ್ದನು ಬೋಧಿಸಿದ ಧಮ್ಮವು : ಧಮ್ಮವು – ಧರ್ಮವು ಹೇಳೋದಿಕ್ಕಿಂತ ತದ್ವಿರುದ್ಧವಾಗಿದೆ.

ಧಮ್ಮವು ಮೂಲಭೂತವಾಗಿ ಹಾಗೂ ಅತ್ಯಗತ್ಯವಾಗಿ ಸಾಮಾಜಿಕವಾದದ್ದು. ಧಮ್ಮ ಎಂದರೆ ಋುಜುತ್ವ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ಮನುಷ್ಯ – ಮನುಷ್ಯರ ನಡುವೆ ಸರಿಯಾದ ಸಂಬಂಧಗಳ ಇರುವುದು .

ಒಬ್ಬ ಮನುಷ್ಯನು ಏಕಾಂಗಿಯಾಗಿದ್ದರೆ ಆತನಿಗೆ ಧಮ್ಮದ ಅಗತ್ಯವಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ .
ಆದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಸಂಬಂಧದಲ್ಲಿ ಜೀವಿಸುತ್ತಿದ್ದರೆ , ಸಮಾಜದಲ್ಲಿ ಒಟ್ಟಿಗೆ ಜೀವಿಸುತ್ತಿದ್ದರೆ ಅವರಿಗಿಷ್ಟವಾಗಲಿ, ಇಷ್ಟವಿಲ್ಲದಿರಲಿ ಧಮ್ಮಕ್ಕೆ ಒ೦ದು ಸ್ಥಾನ ಕೊಡಲೇಬೇಕಾಗುತ್ತದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗದು .ಅಂದರೆ ಸಮಾಜದಲ್ಲಿ ಜೊತೆಯಾಗಿ ವಾಸಿಸುವಾಗ, ಒಬ್ಬರಿಗೊಬ್ಬರು ಸಂಪರ್ಕವಿಲ್ಲದೆ -ಒಡನಾಟವಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವುದಾಗಿದೆ .
ಅಂದರೆ ಧಮ್ಮ ವಿಲ್ಲದೆ ಸಮಾಜವು ನಡೆಯಲಾರದು .

ಸಮಾಜದಲ್ಲಿ ಗುಂಪುಗುಂಪಾಗಿ ಜನಗಳು ಒಟ್ಟಾಗಿ ವಾಸಮಾಡುವಾಗ ಪ್ರತಿಯೊಬ್ಬರಿಗೂ ತಮ್ಮ ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಅವಶ್ಯಕತೆ ಇರುತ್ತದೆ.ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ಬೇಕಾಗುತ್ತದೆ .

ಯಾರಿಗೆ ಸ್ವಾತಂತ್ರ್ಯದ ಬಯಕೆ ಇದೆಯೋ ಅವರು ಧಮ್ಮವನ್ನು ಆಚರಿಸಲೇಬೇಕು.

ಅಂದಮೇಲೆ ಧರ್ಮವೆಂದರೆ ಯಾವುದು ? ಮತ್ತು ಧಮ್ಮವು ಯಾವುದು ಮತ್ತು ಧಮ್ಮ ಯಾಕೆ ಅಗತ್ಯ ?
“ಬುದ್ಧನ ಪ್ರಕಾರ ಧಮ್ಮವು ಪ್ರಜ್ಞೆ ಮತ್ತು ಕರುಣೆಗಳ ಸಂಗಮ.”

ಪ್ರಜ್ಞೆ ಎಂದರೇನು ? ಪ್ರಜ್ಞೆಯ ಅಗತ್ಯವೇನು ?

ಪ್ರಜ್ಞೆಯೆಂದರೆ ಅರಿವು . ಬುದ್ಧನು ತನ್ನ ದಮ್ಮದ ಎರಡು ಮೂಲೆಗಲ್ಲುಗಳಲ್ಲಿ ಪ್ರಜ್ಞೆಯೂ ಒಂದೆಂದು ಪ್ರತಿಪಾದಿಸಿದ .
ಏಕೆಂದರೆ ಮೂಢನಂಬಿಕೆಗೆ ಯಾವುದೇ ಅವಕಾಶ ಕೊಡಲು ಬುದ್ಧನಿಗೆ ಇಷ್ಟವಿರಲಿಲ್ಲ .ಪ್ರಜ್ಞೆ ಇದ್ದ ಕಡೆ ಮೂಢನಂಬಿಕೆ ಅಥವಾ ಮೌಢ್ಯಕ್ಕೆ ಅವಕಾಶವಿರುವುದಿಲ್ಲ ಎಂಬುದಾಗಿದೆ .

ಕರುಣೆ ಎಂದರೇನು ? ಕರುಣೆಯ ಅಗತ್ಯವೇನು ?

ಕರುಣೆಯೇ ಪ್ರೀತಿ. ಅದಿಲ್ಲದೆ ಸಮಾಜವು ಬದುಕಲು ಸಾಧ್ಯವಿಲ್ಲ. ಬೆಳೆಯಲು ಸಾಧ್ಯವಿಲ್ಲ . ಕರುಣೆ ಎಂದರೆ ಪ್ರಕೃತಿ . ಕರುಣೆ ಎಂದರೆ ತಾಯಿಯ ಮಮತೆ .ಈ ಕಾರಣದಿಂದ ಬುದ್ಧನು ಕರುಣೆಯನ್ನು ತನ್ನ ಧಮ್ಮದ ಎರಡನೇ ಮೂಲೆಗಲ್ಲುಆಗಿ ಸ್ಥಾಪಿಸಿದ .

ಇದೆ ಬುದ್ಧನ ಧಮ್ಮ ದ ಅರ್ಥ ವಿವರಣೆ

ಧರ್ಮದ ಅರ್ಥ ವಿವರಣೆಗಿಂತ ದಮ್ಮದ ಅರ್ಥವಿವರಣೆ ಅದೆಷ್ಟು ಭಿನ್ನವಾಗಿದೆ ಗಮನಿಸಿದಿರಾ .

“ಪ್ರಜ್ಞೆ ಮತ್ತು ಕರುಣೆಯ ಒ೦ದು ವಿಶಿಷ್ಟ
ಸಂಯೋಗ ಬುದ್ಧನ ಧಮ್ಮ ”

ಧರ್ಮ ಮತ್ತು ಧಮ್ಮದ ಭಿನ್ನತೆ ಹೀಗಿದೆ .

(ಬಾಬಾಸಾಹೇಬರ Budha and his dhamma ಕೃತಿಯಿಂದ ಆಯ್ದದ್ದು )
ಬಿ.ಪಿ.ತಿಪ್ಪೇಸ್ವಾಮಿ

About The Author

Leave a Reply

Your email address will not be published. Required fields are marked *