May 3, 2024

Chitradurga hoysala

Kannada news portal

ಕನ್ನಡಕ್ಕಾಗಿ ನಾವು ಅಭಿಯಾನ: ಗೀತಗಾಯನ ಕಾರ್ಯಕ್ರಮ ಕನ್ನಡ ಭಾಷೆ, ಸಂಸ್ಕøತಿ ಉಳಿವಿಗೆ ಶ್ರಮಿಸಿ: ಪ್ರಾಂಶುಪಾಲ ಪ್ರಕಾಶ್

1 min read


ಕನ್ನಡಕ್ಕಾಗಿ ನಾವು ಅಭಿಯಾನ: ಗೀತಗಾಯನ ಕಾರ್ಯಕ್ರಮ
ಕನ್ನಡ ಭಾಷೆ, ಸಂಸ್ಕøತಿ ಉಳಿವಿಗೆ ಶ್ರಮಿಸಿ: ಪ್ರಾಂಶುಪಾಲ ಪ್ರಕಾಶ್

ಚಿತ್ರದುರ್ಗ,ಅಕ್ಟೋಬರ್26:
ಪ್ರತಿಯೊಬ್ಬರು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕøತಿಯ ಉಳುವಿಗಾಗಿ ಶ್ರಮಿಸಬೇಕು ಎಂದು ಹಿರಿಯೂರು ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಹೇಳಿದರು.
ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ವಸತಿ ಶಾಲೆಗಳ ಸಮುಚ್ಛಯದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿರಿಯೂರು ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ “ಕನ್ನಡಕ್ಕಾಗಿ ನಾವು ಅಭಿಯಾನ” ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕøತಿಗೆ ಎರಡು ಸಾವಿರಕ್ಕೂ ಹೆಚ್ಚಿನ ಪ್ರಾಚೀನತೆ ಇದ್ದು, ಕನ್ನಡ ಅಚ್ಚುಮೆಚ್ಚಿನ ಭಾಷೆ ಹಾಗೂ ಶ್ರೀಮಂತ ಭಾಷೆಯಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ, ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ತಾಯಿ ಭಾಷೆ ಮರೆಯದಿರಿ ಎಂದು ಸಲಹೆ ನೀಡಿದರು.
ಎಂ.ಪಿ.ನಾಗಶ್ರೀ ಮತ್ತು ತಂಡದವರಿಂದ ಭರತನಾಟ್ಯ, ಜನಪದ ನೃತ್ಯ, ಶಾಸ್ತ್ರೀಯ ನತ್ಯ ಪ್ರದರ್ಶನ ನೀಡಲಾಯಿತು. ಹಿರಿಯೂರು ಏಕನಾಥೇಶ್ವರಿ ಸಂಗೀತ ವಿದ್ಯಾಲಯ ತಿಪ್ಪೇಸ್ವಾಮಿ ಅವರು ಸುಗಮ ಸಂಗೀತ ಹಾಗೂ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಸಹ ಶಿಕ್ಷಕರಾದ ನೀಲಕಂಠಯ್ಯ, ರುದ್ರಪ್ಪ, ಪವಿತ್ರ, ಹರೀಶ್, ಸವಿತಾ, ಬೀರೇಶ್ ಹಾಗೂ ವಿಜಯಕುಮಾರ್, ಕಲಾವಿದರಾದ ಗೀತಾಭಟ್ ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *