May 2, 2024

Chitradurga hoysala

Kannada news portal

ನವಂಬರ್ 08 – 09ರಂದು ಚಿತ್ರದುರ್ಗ ನಗರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ ಬಿ.ಶ್ರೀರಾಮುಲು

1 min read


ನವಂಬರ್ 08 – 09ರಂದು ಚಿತ್ರದುರ್ಗ ನಗರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ ಬಿ.ಶ್ರೀರಾಮುಲು

ಚಿತ್ರದುರ್ಗ, ನವೆಂಬರ್:

ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನವೆಂಬರ್ 08 ಹಾಗೂ 09ರಂದು ಎರಡು ದಿನಗಳ ರಾಜ್ಯಮಟ್ಟದ ಬುಡಕಟ್ಟು ಉತ್ಸವನ್ನು ಆಚರಿಸಲಾಗುತ್ತದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬುಡಕಟ್ಟು ಇತಿಹಾಸ,ಕಲೆ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಶ್ರೀಮಂತಗೊಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಬುಡಕಟ್ಟು ಉತ್ಸವ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ ಬುಡಕಟ್ಟು ಜನರು ತಯಾರಿಸಿದ ಕರಕುಶಲ ವಸ್ತುಗಳು, ನಾಟಿ ಔಷಧಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಆಹಾರ ಮೇಳ ನಡೆಯಲಿದೆ ಎಂದರು.
ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಖಾದ್ಯಗಳ ಪರಿಚಯ ಮಾಡಲು ಚಿಂತಿಸಲಾಗಿದ್ದು, ವಿಶೇಷವಾಗಿ ಬಂಬೂ ಬಿರಿಯಾನಿಯು ಚಿತ್ರದುರ್ಗ ಬುಡಕಟ್ಟು ಉತ್ಸವದಲ್ಲಿ ಆಕರ್ಷಣೆಯ ಖಾದ್ಯವಾಗಲಿದೆ. ಇದರೊಂದಿಗೆ ಕಾಡುಜೇನುತುಪ್ಪ-ಕಾಡುಗೆಣಸುಗಳಿಂದ ತಯಾರಿಸಲಾದ ತರಾವರಿ ಖಾದ್ಯಗಳು ಆಹಾರ ಮೇಳದಲ್ಲಿ ತಮ್ಮದೇ ಸ್ಥಾನ ಪಡೆಯಲಿವೆ. ಬುಡಕಟ್ಟು ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಔಷಧಿಗಳು, ವೈದ್ಯಚಿಕಿತ್ಸಾ ಪದ್ಧತಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವೈವಿಧ್ಯಮಯ ಬುಡಕಟ್ಟು ಆಹಾರಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.
ಈ ಬುಡಕಟ್ಟು ಉತ್ಸವದ ಸಂಜೆಯ ಕಾರ್ಯಕ್ರಮಗಳಲ್ಲಿ ವಿವಿಧ ಬುಡಕಟ್ಟು ಕಲಾ ತಂಡಗಳಿಂದ ನೃತ್ಯ, ಕುಣಿತ, ಬುಡಕಟ್ಟು ಹಬ್ಬಗಳ ಆಚರಣೆ ಮುಂತಾದ ಸಾಂಸ್ಕøತಿಕ ಕಲಾ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಬುಡಕಟ್ಟು ಸಮುದಾಯಗಳ ಜೀವನಶೈಲಿ ಕುರಿತಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ನಿರ್ಮಿಸಲಾಗಿರುವ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಬುಡಕಟ್ಟು ಸಮುದಾಯಗಳಿಗೆ ಶಕ್ತಿಯನ್ನು ತುಂಬುವುದರ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಬಸವನಗೌಡ ಮಾತನಾಡಿ, ಪ್ರತಿವರ್ಷವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಬುಡಕಟ್ಟು ಉತ್ಸವ ಆಚರಣೆ ಮಾಡಲಾಗುತ್ತಿದೆ. ಬುಡಕಟ್ಟು ಸಮುದಾಯದವರ ಸಂಸ್ಕøತಿ, ಆಚಾರ-ವಿಚಾ, ಕಲೆಯನ್ನು ನಾಗರಿಕ ಸಮಾಜಕ್ಕೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಬಾರಿ ಚಿತ್ರದುರ್ಗದಲ್ಲಿ ಬುಡಕಟ್ಟು ಉತ್ಸವ ಆಚರಿಸಲಾಗುತ್ತಿದೆ ಎಂದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಆರು ಬುಡಕಟ್ಟು ಉತ್ಸವಗಳನ್ನು ಆಚರಿಸಲಾಗಿದೆ. ಬುಡಕಟ್ಟು ಸಮುದಾಯಗಳಲ್ಲಿ ನಾಗರಿಕ ಸಮಾಜದ ಅರಿವೇ ಇಲ್ಲ. ರಾಜ್ಯದಲ್ಲಿ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರಿದ್ದು, ಅವರದೇ ಆದ ಭಾಷೆ, ಸಂಸ್ಕøತಿಯನ್ನು ಹೊಂದಿರುತ್ತಾರೆ. ಈ ಎಲ್ಲಾ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಒಟ್ಟುಗೂಡಿಸುವುದು, ಅವರ ಭಾಷೆ, ಕಲೆ, ಸಂಸ್ಕøತಿ, ಆಚಾರ-ವಿಚಾರ, ಉಡುಗೆ-ತೊಡುಗೆ ಹಾಗೂ ಈ ಸಮುದಾಯದವರ ಆಹಾರ ವೈವಿಧ್ಯತೆಯನ್ನು ಪರಸ್ಪರ ಪರಿಚಯಿಸುವುದು ಹಾಗೂ ನಾಗರೀಕ ಸಮಾಜದಲ್ಲಿ ಅವು ಬೆಳಕಿಗೆ ಬರುವಂತೆ ಮಾಡುವುದು ಬುಡಕಟ್ಟು ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜನಸ್ನೇಹಿ ಸೇವೆಯೆಡೆಗೆ ಸಾರಿಗೆ ಇಲಾಖೆ: ಉತ್ತಮ ಉದ್ದೇಶದೊಂದಿಗೆ ಸಾರಿಗೆ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆಯೊಂದಿಗೆ ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಸೇವೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ವಾಹನ ಮಾರಾಟಗಾರರ ಹಂತದಲ್ಲಿ ನೋಂದಣಿ ಪ್ರಕ್ರಿಯೆ, ನೋಂದಣಿ, ರಹದಾರಿ ಹಾಗೂ ಚಾಲನಾ ಅನುಜ್ಞಾ ಪತ್ರ ಮತ್ತು ಇನ್ನಿತರೆ ಸಾರಥಿ ಸೇವೆಗಳು ಹಾಗೂ ವಾಹನ್ ಸೇವೆಗಳ ಒಟ್ಟು 30 ಸೇವೆಗಳನ್ನು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಂಪರ್ಕ ರಹಿತವಾಗಿ ಆರ್‍ಟಿಒ ಕಚೇರಿಗಳಿಗೆ ಭೇಟಿ ನೀಡದೆಯೇ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷರಾದ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸೇರಿದಂತೆ ಇತರರು ಇದ್ದರು.

About The Author

Leave a Reply

Your email address will not be published. Required fields are marked *