ಕೋವಿಡ್ ನಿಂದ ಗುಣಮುಖವಾದ ಪ್ರಧಾನಿ ಮೋದಿಗೆ 150 ಜನ ಪೋಲಿಸ್ ವಿಶೇಷ ಭದ್ರತೆ
1 min readಲಕ್ನೌ, ಆಗಸ್ಟ್ 5: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದು, ಇಂದು ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ಪ್ರಧಾನಿ ಮೋದಿ ಇಂದು ಬೆಳಗ್ಗೆ 11.30ಕ್ಕೆ ಸಾಕೇತ್ ಕಾಲೋನಿಗೆ ವಿಶೇಷ ವಿಮಾನದ ಮೂಲಕ ಬಂದು ತಲುಪಲಿದ್ದಾರೆ. ಈ ವೇಳೆ 150 ಸ್ಥಳಿಯ ಪೊಲೀಸರು ವಿಶೇಷ ಭದ್ರತೆ ಒದಗಿಸಲಿದ್ದಾರೆ ಎಂದು ಉತ್ತರ ಪ್ರದೇಶ ಡಿಐಜಿ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್‌ನಿಂದ ಗುಣಮುಖರಾಗಿರುವ 150 ಜನ ಪೊಲೀಸ್ ಸಿಬ್ಬಂದಿಗಳು ಮೋದಿಯ ಸುತ್ತು ರಕ್ಷಣೆಗೆ ನಿಯೋಜನೆಯಾಗಿದ್ದಾರೆ. ಇವರು ಮೋದಿಯ ಸುತ್ತ ಭದ್ರತೆಗೆ ಆಯೋಜನೆಯಾಗಿರುತ್ತಾರೆ.
ಕೊರೊನಾದಿಂದ ಚೇತರಿಸಿಕೊಂಡ ಪೊಲೀಸರನ್ನು ಭದ್ರತೆಗೆ ನೇಮಿಸುವುದರ ಹಿಂದೆ ನಿರ್ದಿಷ್ಟ ಕಾರಣ ಅಡಗಿದೆ. ತಜ್ಞರು ಹೇಳಿರುವ ಪ್ರಕಾರ, ಅದಾಗಲೇ ಸೋಂಕಿಗೆ ಒಳಗಾಗಿರುವ ಈ ಪೊಲೀಸರ ದೇಹದಲ್ಲಿ ಅಗತ್ಯ ಮಟ್ಟದ ರೋಗನಿರೋಧಕ ಶಕ್ತಿ ಇದೆ. ಇನ್ನು ಎರಡು ಅಥವಾ ಮೂರು ತಿಂಗಳು ಕಾಲ ಇವರಿಗೆ ಮತ್ತೆ ಕೊರೊನಾ ಬರುವ ಸಾಧ್ಯತೆ ಇಲ್ಲ. ಹಾಗಾಗಿ, ಪ್ರಧಾನಿ ಅವರಿಗೆ ಇವರಿಂದು ಸೋಂಕು ತಗುಲುವ ಸಾಧ್ಯತೆ ಇಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸಾಕೇತ್ ಕಾಲೋನಿಯಲ್ಲಿ ಇದುವರೆಗೂ 16 ಜನರು ಕೊರೊನಾಗೆ ಬಲಿಯಾಗಿದ್ದು, ಇನ್ನು 604 ಕೇಸ್‌ಗಳು ಸಕ್ರಿಯವಾಗಿದೆ. ಹಾಗಾಗಿ, ಈ ನಗರದಲ್ಲಿ ಮೋದಿ ಅವರ ಭದ್ರತೆಗೆ .