May 3, 2024

Chitradurga hoysala

Kannada news portal

ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ದೇಶದ ಐಕ್ಯತೆಯ ಪ್ರತಿಬಿಂಬ ಸಂವಿಧಾನವನ್ನು ಬಿಜೆಪಿಗರಿಂದ ರಕ್ಷಿಸಬೇಕಿದೆ: ದಿನೇಶ್ ಕೆ.ಶೆಟ್ಟಿ

1 min read




ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ದೇಶದ ಐಕ್ಯತೆಯ ಪ್ರತಿಬಿಂಬ ಸಂವಿಧಾನವನ್ನು ಬಿಜೆಪಿಗರಿಂದ ರಕ್ಷಿಸಬೇಕಿದೆ: ದಿನೇಶ್ ಕೆ.ಶೆಟ್ಟಿ

ದಾವಣಗೆರೆ:
ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವನ್ನು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ದೇಶದ ಐಕ್ಯತೆಯ ಪ್ರತಿಬಿಂಬದಂತಿರುವ ಅಂಬೇಡ್ಕರ್ ಅವರ ಸಂವಿಧಾನವನ್ನು ತೆಗೆದುಹಾಕಲು ಯತ್ನಿಸಿರುವ ಬಿಜೆಪಿಗರಿಂದ ರಕ್ಷಿಸಬೇಕಿದೆ ಎಂದರು.
ಇಂದು ಅಂಬೇಡ್ಕರ್ ಅವರನ್ನು ಗುಣಗಾನ ಮಾಡುವ ಬಿಜೆಪಿ ತನ್ನ ಪಕ್ಷದ ಸಂಸದರು ಸಂವಿಧಾನ ಬದಲಾಯಿಸುತ್ತೇವೆ ಎಂದಾಗ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೇ ಮತ್ತೆ ಅವರನ್ನು ಸಂಸದರನ್ನಾಗಿಸಿದೆ. ಕೃತಿಗೂ ಮಾತಿಗೂ ಬೇರೆ-ಬೇರೆ ಇರುವ ಬಿಜೆಪಿಗೆ ಅಂಬೇಡ್ಕರ್ ಅವರ ಹೆಸರನ್ನು ಹೇಳಲು ಯೋಗ್ಯತೆ ಇಲ್ಲ ಎಂದರು. ಎಐಸಿಸಿ ವಕ್ತಾರ ಹೆಚ್.ಜಿ.ಮೈನುದ್ಧೀನ್ ಮಾತನಾಡಿ ಸಂವಿಧಾನವನ್ನು ಅಳಿಸಿ ಕೋಮು ಅಜೆಂಡಾವನ್ನು ದೇಶದಲ್ಲಿ ತರಲು ಬಿಜೆಪಿ ಯತ್ನಿಸುತ್ತಿದ್ದು, ಇದನ್ನು ತಡೆಯುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ಬಿಜೆಪಿಗರು ಇತ್ತೀಚೆಗೆ ಅಂಬೇಡ್ಕರ್ ಜನ್ಮದಿನ ಮತ್ತು ಪರಿನಿಬ್ಬಾಣ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಎಂದರೆ ಪುರೋಹಿತ ಬಿಜೆಪಿಗರಿಗೆ ಆಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹರೀಶ್ ಕೆ.ಎಲ್.ಬಸಾಪುರ ಮಾತನಾಡಿ ಅಂಬೇಡ್ಕರ್ ಅವರು ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ. ಈ ದೇಶದ ಆಸ್ತಿ . ಅವರು ರಚಿಸಿದ ಸಂವಿಧಾನದಿಂದ ಕೇವಲ ದಲಿತರಿಗಲ್ಲದೇ ಎಲ್ಲಾ ಜಾತಿ, ಧರ್ಮದ ಬಡವರಿಗೆ ಮೀಸಲಾತಿ ದೊರೆತಿದೆ ಎಂದರು.
ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರ ನಡವಳಿಕೆ ಬಗ್ಗೆ ದಲಿತರಲ್ಲದೇ ಎಲ್ಲಾ ಜಾತಿ ಧರ್ಮದ ಬಡವರು ಎಚ್ಚರದಿಂದ ಇರಬೇಕೆಂದು ತಿಳಿಸಿದರು.
ಕೆಪಿಸಿಸಿ ಎಸ್.ಸಿ. ಘಟಕದ ರಾಜ್ಯ ಕಾರ್ಯದರ್ಶಿ ಸೋಮಾಲಾಪುರದ ಹನುಮಂತಪ್ಪ ಮಾತನಾಡಿ ಅಂಬೇಡ್ಕರ್ ಅವರು ವಿಶ್ವದಲ್ಲಿ ಮನೆ ಮಾತಾಗಿದ್ದು, ಅವರು ಬರೆದ ಸಂವಿಧಾನ ಅನೇಕ ದೇಶಗಳಿಗೆ ಸ್ಪೂರ್ತಿಯಾಗಿದೆ ಎಂದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಜಿಲ್ಲಾ ಕಾರ್ಯದರ್ಶಿ ಜಿ.ರಾಕೇಶ್ ಮಾತನಾಡಿ ಅಂಬೇಡ್ಕರ್ ಅವರು ಶೋಷಿತ ಸಮಾಜದಲ್ಲಿ ಜನ್ಮಿಸಿದರೂ ಸಹ ಇಡೀ ದೇಶದ ಮಾನವ ಕುಲಕ್ಕೆ ಸಂಬಂಧಿಸಿದಂತೆ ಸಂವಿಧಾನ ರಚಿಸಿದರು ಎಂದು ಪ್ರಶಂಶಿಸಿದರು.
ಕಾಂಗ್ರೆಸ್ ಎಸ್.ಸಿ ದಾವಣಗೆರೆ ಉತ್ತರ ಘಟಕದ ಅಧ್ಯಕ್ಷ ರಂಗನಾಥಸ್ವಾಮಿ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನ ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲ. ಇಡೀ ಶೋಷಿತ ಸಮಾಜಕ್ಕೆ ನೀಡಿದ ಕೊಡುಗೆ ಎಂದರು.
ಸೇವಾದಳದ ಅಬ್ದುಲ್ ಜಬ್ಬಾರ್ ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನದ ಆಶಯದಂತೆ ನಾವು ಮುನ್ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಮಹಾನಗರ ಪಾಲಿಕೆ ವಿಪಕ್ಷ ಎ.ನಾಗರಾಜ್, ಅಂಗವಿಕಲರ ಘಟಕದ ಅಧ್ಯಕ್ಷ ಯತಿರಾಜ್, ಶ್ರೀಮತಿ ಸುನೀತಾ ಭೀಮಣ್ಣ, ಅಲೆಕ್ಸಾಂಡರ್, ವಿರೇಶ್, ಸಿದ್ದೇಶ್, ಯುವರಾಜ್, ಮಹಮದ್ ಪಾಷಾ, ಮಹ್ಮದ್ ಜಿಕ್ರಿಯಾ, ಬಸವರಾಜ್ ಮತ್ತಿತರರಿದ್ದರು.

About The Author

Leave a Reply

Your email address will not be published. Required fields are marked *