April 29, 2024

Chitradurga hoysala

Kannada news portal

ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಚಾಲನೆ: ಕಾಂಗ್ರೆಸ್ ಸರ್ವ ಜನರ ಹಿತಕಾಯುವ ಪಕ್ಷ: .

1 min read



ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಚಾಲನೆ

ಕಾಂಗ್ರೆಸ್ ಸರ್ವ ಜನರ ಹಿತಕಾಯುವ ಪಕ್ಷ: ಎಚ್.ಆಂಜನೇಯ.

ಹೊಳಲ್ಕೆರೆ: ಡಿ.11
ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಹಿತಕ್ಕಾಗಿ, ದೇಶದ ಏಕತೆ, ಸಮಗ್ರತೆಯನ್ನು ಬಲಪಡಿಸುವ, ಮುನ್ನಡೆಸುವ, ದೇಶವನ್ನು ಅಭಿವೃದ್ಧಿಪಡಿಸುವ ಎಲ್ಲ ಜನರ ಏಳಿಗೆಗೆ ಶ್ರಮಿಸುವ ಪಕ್ಷವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸದಸ್ಯನಾಗುವುದು ನನ್ನ ಭಾಗ್ಯ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸ ಹೊಂದಿದ್ದು, Àನ್ನು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಸ್ಥಾಪನೆಯಾದ ಪಕ್ಷವಾಗಿದೆ. ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ಸಮಯದಲ್ಲಿ ರೈಲ್ವೆ, ಬಸ್ಸು, ಸೇತುವೆಗಳು, ಹಳ್ಳ ಹರಿಯುತ್ತಿದ್ದರೂ ಆ ಊರಿನ ಜನ ಬೇರೆ ಊರುಗಳಿಗೆ ತೆರಳುವಂತಿರಲಿಲ್ಲ. ಇದಲ್ಲೆದೇ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದ್ದು, ಬ್ರಿಟಿಷರು ದೇಶದ ಸಂಪತ್ತನ್ನೆಲ್ಲ ಲೂಟಿ ಮಾಡಿಕೊಂಡು ಹೋಗಿದ್ದರು. ದೇಶಕ್ಕೆ ಸ್ವಾಂತಂತ್ರ್ಯ ದೊರಕಿದ ಸಮಯದಲ್ಲಿ ಮೊದಲ ಪ್ರಧಾನಿಯಾದ ಪಂಡಿತ್ ಜವಹಾರ್ ಲಾಲ್ ನೆಹರೂರವರು ದೇಶದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ, ರೈಲ್ವೆ, ನಿಲ್ದಾಣ, ಆಸ್ಪತ್ರೆಗಳನ್ನು, ಡ್ಯಾಂಗಳನ್ನು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗುವುದಕ್ಕೂ ಮುನ್ನ ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿರಲಿಲ್ಲ, ಬದುಕುವ ವಾತಾವರಣವಿರದೇ ಜಾತಿಯ ವ್ಯವಸ್ಥೆಯಲ್ಲಿ ಅತ್ಯಂತ ಹೀನವಾದ ಸ್ಥಿತಿಯಲ್ಲಿದ್ದ ವೇಳೆ ಕ್ರಾಂತಿಕಾರ ಬದಲಾವಣೆ ತಂದು ಆರ್ಥಿಕ ಶಕ್ತಿ ತುಂಬಿದರು.ಬ್ಯಾಂಕುಗಳೆಂದರೆ ಕೇವಲ ಶ್ರೀಮಂತರುಗಳಿಗೆ ಮಾತ್ರ ಮಾತ್ರ ಇದ್ದವು. ಇವುಗಳನ್ನು ರಾಷ್ಟ್ರೀಕರಣ ಮಾಡಿ ಪ್ರತಿಯೊಬ್ಬರೂ ವ್ಯಾಂಕಿನ ವಹಿವಾಟು ನಡೆಸಲು, ಸೌಲಭ್ಯಗಳನ್ನು ಪಡೆದುಕೊಳ್ಳಲು ಉದ್ಯಮಿಗಳಾಗಲು ಅವಕಾಶ ಕಲ್ಪಿಸುವುದರೊಂದಿಗೆ ಬಡತನ ನಿರ್ಮೂಲನೆಗೆ ನಾಂದಿ ಹಾಡಿದರು ಎಂದು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಬಣ್ಣಿಸಿದರು.
ಇಂದಿರಾ ಗಾಂಧಿ ಅವರು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದು ದೇಶ ದ್ರೋಹಿಗಳಿಗೆ ಕಠಿಣವಾದ ದಿನವಾಗಿತ್ತು. ಈ ವೇಳೆ ಬಡವರಿಗೆ ಸುವರ್ಣ ಯುಗವಾಗಿತ್ತು. ಭೂಮಿ ಇಲ್ಲದವರಿಗೆ ಭೂಮಿ ದೊರೆಯಿತು.ಇಂತಹ ಹಲವಾರು ಕೆಲಸಗಳನ್ನು ಮಾಡಿದ ಪಕ್ಷದ ಸದಸ್ಯನಾಗುವುದು ನಮ್ಮ ಪುಣ್ಯ. ಕಾಂಗ್ರೆಸ್ ಪಕ್ಷವು ಜಾತ್ಯಾತೀತ, ಧರ್ಮಾತೀತ, ಎಲ್ಲ ಬಡವರು, ಕೃಷಿಕರು ಇರುವ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ದೇಶದಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದು ಹೇಳಿದರು.
ಕೆಪಿಸಿಸಿ ಉಸ್ತುವಾರಿ ಡಾ. ಇಮ್ತಿಯಾಜ್ ಅಹಮದ್ ಮಾತನಾಡಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಪುರಸಭೆ ಸದಸ್ಯರಾದ ವಸಂತರಾಜಪ್ಪ, ರುದ್ರಪ್ಪ, ಸೈಯದ್ ಮಜೀದ್, ಮನ್ಸೂರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ರುದ್ರಪ್ಪ, ಪಪಂ ಮಾಜಿ ಉಪಾಧ್ಯಕ್ಷ ಲಿಂಗರಾಜು, ಕೆಪಿಸಿಸಿ ಸಂಯೋಜಕ ಲೋಕೇಶ್ ನಾಯ್ಕ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಬಿಕಾ, ಮುಖಂಡರಾದ ಮಂಜುನಾಥ್, ತಿಪ್ಪೇಸ್ವಾಮಿ, ಮಾರುತಿ, ಮಹೇಶ್ವರಿ, ಭಾಗ್ಯಮ್ಮ ರಾಜಪ್ಪ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೇಮಂತ್ ಗೌಡ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *