May 5, 2024

Chitradurga hoysala

Kannada news portal

ಬೇಸಿಗೆಯಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸಲು ಬಟ್ಟಲು ಅಳವಡಿಕೆ.

1 min read

ಬೇಸಿಗೆಯಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸಲು ಬಟ್ಟಲು ಅಳವಡಿಕೆ.

ಹಾಸ್ಟೆಲ್ ನಲ್ಲಿ ಮರಗಳ ಮೇಲೆ ನೀರಿನ ವ್ಯವಸ್ಥೆ | ಪ್ರಾಣಿ ಪಕ್ಷಿಗಳ ಪ್ರೇಮ ಮೆರೆದ ವನಸಿರಿ ಫೌಂಡೇಶನ್ .

 

ಕಾರಟಗಿ:

ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ. ಬಾಯಾರಿದೊಡನೆ ಜನರು ನೀರಿಗಾಗಿ ಹಾತೊರೆಯುತ್ತಾರೆ. ಎಲ್ಲೂ ನೀರು ಸಿಗದಿದ್ದರೆ ದುಡ್ಡುಕೊಟ್ಟು ಖರೀದಿಸಿಯಾದರೂ ದಾಹ ದೂರ ಮಾಡಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿಗಳು,ಪಕ್ಷಿಗಳು ಏನು ಮಾಡಬೇಕು. ಜನರಿಗೆ ಸಿಗುವಷ್ಟು ಸುಲಭವಾಗಿ ಪಕ್ಷಿಗಳಿಗೆ ನೀರಿನ ಅಭಾವದಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಬೇಸಿಗೆಯಲ್ಲೇ ಪ್ರಾಣಿಪಕ್ಷಿಗಳುಳ ಹೆಚ್ಚು ಅಪಾಯಕ್ಕೆ ಸಿಲುಕುತ್ತವೆ. ಈ ರೀತಿ ಸಂಕಷ್ಟ ಎದುರಿಸುವ ಜೀವಿಗಳಲ್ಲಿ ಪಕ್ಷಿಗಳೇ ಹೆಚ್ಚು.ಬೇಸಿಗೆಯಲ್ಲಿ ಪಕ್ಷಿಗಳು ಬಹುಬೇಗನೆ ದಾಹದಿಂದ ಪರಿತಪಿಸುತ್ತವೆ.ಬೇಸಿಗೆಯ ತಾಪ ಹಾಗೂ ನೀರಿನ ಕೊರತೆಯಿಂದ ಪಕ್ಷಿಗಳ ಮಾರಣ ಹೋಮವೇ ನಡೆಯುತ್ತದೆ.ಪಕ್ಷಿಗಳ ರೋಧನೆಯನ್ನು ಮನಗಂಡು ಕಾರಟಗಿಯ ವನಸಿರಿ ಫೌಂಡಶೇನ್ ಸದಸ್ಯರು.

ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಪಾಲಕರ ವಸತಿ ನಿಲಯದಲ್ಲಿ ಪ್ಲಾಸ್ಟಿಕ್.ಮಣ್ಣಿನ ಬಟ್ಟಲುಗಳಲ್ಲಿ ನೀರು ತುಂಬಿ ಆವರಣದಲ್ಲಿರುವ ಗಿಡ ಮರಗಳಿಗೆ ನೇತು ಹಾಕಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಕಾರ್ಯ ಮಾಡಿ ಪ್ರಾಣಿ ಪಕ್ಷಿಗಳ ಪ್ರೇಮ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಬೇಸಿಗೆಯಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ನೀರು ಅತ್ಯವಶ್ಯಕ. ಪ್ರತಿದಿನ ಎರಡು ಅಥವಾ ಮೂರು ಬಾರಿ ನೀರು ಕುಡಿಯುತ್ತವೆ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಮನೆಗಳು, ಮರ ಗಿಡಗಳ ಮೇಲೆ ಒಂದು ಬಟ್ಟಲು ಅಥವಾ ಇತರ ಪಾತ್ರೆಗಳಲ್ಲಿ ಪ್ರತಿ ದಿನ ನೀರು ಇಡುವುದರಿಂದ ಸಾವಿರಾರು ಪ್ರಾಣಿ ಪಕ್ಷಿಗಳ ಜೀವ ಉಳಿಯಲಿದೆ. ಪ್ರಾಣಿ,ಪಕ್ಷಿಗಳಿಗೆ ನಮ್ಮಂತೆ ಜೀವಿಸಲು ಅವಕಾಶ ಮಾಡಿಕೊಡಬೇಕು’ ಎಂದು ವನಸಿರಿ ಫೌಂಡೇಶನ್ ಸದಸ್ಯರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡದ ಸದಸ್ಯರಾದ ಆಯ್ಯನಗೌಡ ,
ರುದ್ರಗೌಡ ಮಾ.ಪಾ, ವಿಠ್ಠಲ್ ಜೀರಗಾಳಿ ,ಶಿವಕುಮಾರ್ ಸರ್ ಹಾಗೂ ಹಾಸ್ಟೇಲ್ ಸಿಬ್ಬಂದಿಗಳಾದ ಮೊಹಮ್ಮದ್ ರಫೀಕ್, ನಿರುಪಾದಿ ಮತ್ತು ವಿದ್ಯಾರ್ಥಿಗಳು ಇದ್ದರು

ವರದಿ: ಬಾಲರಾಜ ತಾಳಕೇರಿ.

About The Author

Leave a Reply

Your email address will not be published. Required fields are marked *