May 17, 2024

Chitradurga hoysala

Kannada news portal

ಕ್ಷೇತ್ರದ ಹಳ್ಳಿ ಸಮಸ್ಯೆ ಗೋತ್ತು ಅವುಗಳ ಪರಿಹಾರಕ್ಕೆ ಬೆಂಬಲ ನೀಡಿ: ಅಭ್ಯರ್ಥಿ ಸೌಭಾಗ್ಯ ಬಸವರಾಜನ್

1 min read


ಕ್ಷೇತ್ರದ ಪ್ರತಿಯೊಂದು ಹಳ್ಳಿ ಸಮಸ್ಯೆ ನನಗೆ ಗೋತ್ತು ಅವುಗಳ ಪರಿಹಾರಕ್ಕೆ ನನಗೆ ಬೆಂಬಲ ನೀಡಿ:

ಚಿತ್ರದುರ್ಗ:
ಕ್ಷೇತ್ರದ ಪ್ರತಿಯೊಂದ ಗ್ರಾಮಗಳ ಪರಿಚಯವಿದೆ. ಅಲ್ಲಿನ ಮೂಲಭೂತ ಸಮಸ್ಯೆಗಳನ್ನು ನಾನು ಅರಿತಿರುವೆ ಅವುಗಳ ಪರಿಹಾರಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ತಿಳಿಸಿದರು.

ತಾಲೂಕಿನ ವಿಜಾಪುರ,ಕಲ್ಕುಂಟೆ,ಲಕ್ಷ್ಮಿ ಸಾಗರ, ಚನ್ನಯ್ಯನಹಟ್ಟಿ,ಐಯನಹಳ್ಳಿ,ಕುರುಬರಹಟ್ಟಿ,ತಿಮ್ಮಪ್ಪಯ್ಯನಹಳ್ಳಿ,ಹೊಸೂರು,ವಡ್ಡನಳ್ಳ,ಮಾಳೇನಹಳ್ಳಿ, ಮಾರಘಟ್ಟ, ಗೂಳಯ್ಯನಹಟ್ಟಿ ಗ್ರಾಮಗಳಲ್ಲಿ ಮನೆ ಮನೆಯ ಪ್ರಚಾರ ನಡೆಸಿ ತಿಳಿಸಿದರು.

ಚುನಾವಣೆಗಳಲ್ಲಿ ಮಹಿಳೆಯರಿಗೆ ಅವಕಾಶಗಳು ಸಿಗುವುದು ಕಡಿಮೆ ಆದರೆ ಚಿತ್ರದುರ್ಗದ ವಿಧಾನಸಭಾ ಚುನಾವಣೆಗೆ ಮೊಟ್ಟಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಚಿತ್ರದುರ್ಗ ಕ್ಷೇತ್ರದಲ್ಲಿ ಮಹಿಳೆಯರು ಕೂಡ ಪುರುಷರಿಗೆ ಸಮಾನರಾಗಿದ್ದು ತಾವುಗಳೆಲ್ಲರೂ ಕೂಡ ನನಗೆ ಮತವನ್ನು ನೀಡುತ್ತಿದ್ದಲ್ಲಿ ಬಹುಮತದಿಂದ ಗೆಲ್ಲುವುದು ಖಚಿತ ಎಂದು ತಿಳಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮಗಳ ಪರಿಚಯವಿದೆ. ಗ್ರಾಮದಲ್ಲಿನ ಪ್ರತಿಯೊಬ್ಬರ ಪರಿಚಯ ನನಗೆ ಇದೆ,ಚಿತ್ರದುರ್ಗ ಸ್ಥಳೀಯ ನಿವಾಸಿಯಾಗಿರುವದರಿಂದ ಗ್ರಾಮದ ಎಲ್ಲಾ ಜನರಿಗೂ ನಾನು ಚಿರಪರಿಚೀರ್ತಳಾಗಿದ್ದೇನೆ ಹಾಗಾಗಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನನಗೆ ಬೆಂಬಲವನ್ನು ನೀಡಬೇಕು ಎಂದು ಮತದಾರರಿಗೆ ತಿಳಿಸಿದರು.

ರಾಜಕೀಯ ಕ್ಷೇತ್ರದಲ್ಲಿ ನನಗೆ ಅಪಾರ ಅನುಭವವಿದೆ ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಜಿಲ್ಲಾ ಪಂಚಾಯಿತಿಯ ಹೊರಗೂ ಅಧಿಕಾರವನ್ನು ನಡೆಸಿದ್ದೇನೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ, ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವುದರ ಮೂಲಕ ಜಿಲ್ಲಾ ಪಂಚಾಯಿತಿಯಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಆ ಒಂದು ನಿಟ್ಟಿನಲ್ಲಿ ಈ ಬಾರಿಯ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯನಿರ್ವಹಿಸಲು ಮತದಾರರು ತೆಂಗಿನತೋಟದ ನನ್ನ ಗುರುತಿಗೆ ಮತವನ್ನು ನೀಡಬೇಕೆಂದು ತಿಳಿಸಿದರು.

ಮಾಜಿ ಶಾಸಕರಾದ ಎಸ್ ಕೆ ಬಸವರಾಜ್ ರವರು ಈ ಹಿಂದೆ ಶಾಸಕರಾದ ಸಮಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರ ಮೇಲೆ ಇಟ್ಟಂತಹ ನಂಬಿಕೆ,ಕಾಳಜಿ, ಪ್ರೀತಿ, ವಾತ್ಸಲ್ಯ, ಬೆಂಬಲ, ನನ್ನ ಮೇಲೆ ಕೂಡ ನೀವು ತೋರಿಸಬೇಕು ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ತಾವುಗಳೆಲ್ಲರೂ ಕೂಡ ಅಮೂಲ್ಯವಾದ ಮತವನ್ನು ನನಗೆ ನೀಡಿ ಸಂಪೂರ್ಣವಾದ ಬೆಂಬಲವನ್ನು ನೀಡಬೇಕೆಂದು ಮನವಿ ಮಾಡಿದರು.

About The Author

Leave a Reply

Your email address will not be published. Required fields are marked *