April 20, 2024

Chitradurga hoysala

Kannada news portal

ಭಾರತೀಯ ಜನತಾ ಪಾರ್ಟಿಯ ಮುಖಂಡ, ಸಿದ್ಧೇಶ್ ಯಾದವ್ ನಿಧನ:

1 min read

ಭಾರತೀಯ ಜನತಾ ಪಾರ್ಟಿಯ ಮುಖಂಡ ಸಿದ್ಧೇಶ್ ಯಾದವ್ ನಿಧನ:

ಚಿತ್ರದುರ್ಗ :
ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ವಿಭಾಗದ ಪ್ರಬಾರಿಗಳಾದ ಸಿದ್ಧೇಶ್ ಯಾದವ್ (49) ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಛೇರಿಯಲ್ಲಿ 3/6/2023 ರ ಸೋಮ ವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಸೋಮ ವಾರ ಮಧ್ಯಾಹ್ನ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ಪಕ್ಷದ ಸಭೆಯಲ್ಲಿರುವಾಗಲೇ ಹೃದಯಾಘಾತವಾದಾಗ ಅವರನ್ನು ಹತ್ತಿರದ ಕೆಸಿ ಜನರಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಇಲ್ಲವಾಗಿದ್ದಾರೆ. ಇವರು ಎಬಿವಿಪಿಯಲ್ಲಿ 1988ರಿಂದ ಕಾರ್ಯ ನಿರ್ವಹಿಸಿದ್ದು, ನಗರ ಕಾರ್ಯದರ್ಶಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದು, ನಂತರ ಬಿಜೆಪಿಯನ್ನು ಸೇರಿದ ಅವರು ಇದರಲ್ಲಿ ಎನ್.ಜಿ.ಓ.ರಾಜ್ಯ ಸಹ ಸಂಚಾಲಕರಾಗಿ, ಚಿತ್ರದುರ್ಗ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ, 2008 ರಿಂದ 2011ರವರೆಗೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, 2012ರಲ್ಲಿ ಬಿಜೆಪಿಯಿಂದ ಹಿರಿಯೂರು ವಿಧಾನಸಬಾ ಕ್ಷೇತ್ರದ ಅಭ್ಯರ್ಥಿಯಾಗಿ, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಈಗ ಹಾಲಿ ಬಳ್ಳಾರಿ ವಿಭಾಗದ ಪ್ರಬಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಆಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಸ್ವಂತ ಹಿರಿಯೂರು ತಾಲ್ಲೂಕಿನ ಬಸಪ್ಪ ಮಾಳಿಗೆಯಾಗಿದೆ. ಎಂ.ಎ.ಪದವೀದರರರಾಗಿದ್ದ, ಇವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಆರ್.ಎಸ್.ಎಸ್.ನ ರಾಷ್ಟ್ರೀಯ ಸರಕಾರ್ಯವಾಹರಾಗಿದ್ದ ದತ್ತಾತ್ರೇಯ ರವರ ಜೊತೆಯಲ್ಲಿ ಒಡನಾಡಿಯಾಗಿದ್ದರು.

ಸಂತಾಪ: ಸಿದ್ಧೇಶ್ವ ಯಾದವ್ ರವರು ಆಗಲಿಕೆಗೆ ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ದಾವಣಗೆರೆ ಸಂಸದರಾದ ಜಿ,ಎಂ ಸಿದ್ದೇಶ್ವರ್, ಶಾಸಕರಾದ ಎಂ.ಚಂದ್ರಪ್ಪ ವಿಧಾನ ಪರಿಷತ್ ಮುಖ್ಯ ಸಚೇತಕರಾದ ವೈ.ಎ.ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಶ್ರೀಮತಿ ಪೂರ್ಣೀಮಾ ಶ್ರೀನಿವಾಸ್, ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷರಾದ ಎ.ಮುರುಳಿ, ಮುಖಂಡರಾದ ಲಿಂಗಮೂರ್ತಿ, ಜಯಪಾಲಯ್ಯ, ಅನಿತ್ ಕುಮಾರ್ ಸೇರಿದಂತೆ ಇತರರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಅಂತ್ಯಕ್ರಿಯೆ: ಇಂದು (ಮಂಗಳವಾರ೪-೭-೨೦೨೩) ಸ್ವಗ್ರಾಮವಾದ ಹಿರಿಯೂರಿನ ಬಸಪ್ಪ ಮಾಳಿಗೆಯಲ್ಲಿ ಮಧಾಹ್ನ ಮೃತರ ಅಂತ್ಯಕ್ರಿಯೇ ನಡಯಲಿದೆ.

About The Author

Leave a Reply

Your email address will not be published. Required fields are marked *