ಬಿಸಿ ನೀರು ಮನೆತನದಿಂದ ಶ್ರೀಮಠದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ.
1 min readಬಿಸಿ ನೀರು ಮನೆತನದಿಂದ ಶ್ರೀಮಠದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ.
ಮೊಳಕಾಲ್ಮೂರು:
ಮಕ್ಕಳ ಬದುಕಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರದ ಅಗತ್ಯವಿದೆ ಎಂದು ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನ ಶಾಖ ಮಠದ ಮ.ನಿ. ಪ್ರ.ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಎಸ್ ವಿ ಎಂ ವಿದ್ಯಾಪೀಠದ ಆವರಣದಲ್ಲಿ ಬಿಸಿ ನೀರು ಮನೆತನದ ಜೀವ ರತ್ನಮ್ಮ ಇವರ ಪುತ್ರಿ ಸುಶ್ಮಿತಾ ಹಿರೇಮಠ್ ಇವರು ಗೆಳತಿಯರಾದ ಡಾ. ಮೀರಾ ಶ್ರೀಮತಿ ಸುನಿತಾ ಅಮೇರಿಕಾ ಇವರು 250 ಮಕ್ಕಳಿಗೆ ನೀಡಿದ್ದ ಸಮವಸ್ತ್ರ ವಿತರಿಸಿ ಮಾತನಾಡಿದರು.
ಶಿಕ್ಷಣ ಆರೋಗ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಈ ಪ್ರದೇಶದ ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವ ಪಣತೊಟ್ಟು, ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಮಠದ ಕಾರ್ಯದರ್ಶಿ ಪಿ ಆರ್ ಕಾಂತರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದುಳಿದ ಪ್ರದೇಶವಾದ ಮೊಳಕಾಲ್ಮೂರು, ಕೂಡ್ಲಿಗಿ ಚಳ್ಳಿಕೆರೆ ,ಬಳ್ಳಾರಿ, ರಾಯದುರ್ಗ ಭಾಗದ ಜನರಿಗೆ ಸದಾ ಬಸಾವದಿ ಶಿವ ಶರಣರ ವಚನ ಸಾಹಿತ್ಯ ಬೋಧನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಾ ಶಿಕ್ಷಣದ ಖಾಸಗಿಕರಣ ಮತ್ತು ವ್ಯಾಪಾರಿಕರಣದ ಇಂತಹ ಪರಿಸ್ಥಿತಿಯಲ್ಲಿ ನೂರಾರು ಬಡ ಮಕ್ಕಳಿಗೆ ವಸತಿಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸರ್ಕಾರವು 100 ವಿದ್ಯಾರ್ಥಿಗಳಿಗೆ ಶ್ರೀಮಠದಲ್ಲಿ ವಸತಿ ಸೌಕರ್ಯ ಕಲ್ಪಿಸಿದ್ದು ಇಲ್ಲಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 200 ವಿದ್ಯಾರ್ಥಿಗಳು ದಾಖಲೆಯಾಗಿರುವುದರಿಂದ ,ಉಳಿದ ಮಕ್ಕಳಿಗೆ ಊಟ ವಸತಿ ಕಲ್ಪಿಸಲು ಶ್ರೀಗಳು ಹರಸಹಾಸ ಪಡುತ್ತಿದ್ದಾರೆ.
ಈಗಾಗಲೇ ನಮ್ಮ ಸಂಸ್ಥೆಯು ಆದಾಯ ತೆರಿಗೆ ಇಲಾಖೆಯ ಎಟಿಜಿ ಅನುಮತಿ ಪಡೆದಿದ್ದು, ತೆರಿಗೆ ಪಾವತಿದಾರರು ಶ್ರೀ ಮಠಕ್ಕೆ ದಾನ ನೀಡುವ ಮನಸ್ಸು ಮಾಡಿದರೆ ಶ್ರೀಮಠವು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಮತ್ತಷ್ಟು ಅನುಕೂಲಕರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಗಳು ಮಕ್ಕಳಿಗೆ ಸಮವಸ್ತ್ರ ವಿತರಿಸಿ ದಾನಿಗಳಾದ ಬಿಸಿನೀರು ಮನೆತನದ ಜೀವ ರತ್ನಮ್ಮ ಇವರ ಮಗಳಾದ ಸೂಕ್ಷ್ಮ ಹಿರೇಮಠ್ ಇವರ ಗೆಳತಿಯರಾದ ಡಾ. ಮೀರಾ ಮತ್ತು ಸುನಿತಾ ಅವರಿಗೆ ಆಶೀರ್ವಚನ ನೀಡಿದರು.
ಎಸ್‌ವಿಎಂ ವಿದ್ಯಾಪೀಠದ ಮುಖ್ಯೋಪಾಧ್ಯರಾದ ಮಂಜಯ್ಯ, ಶಿಕ್ಷಕರಾದ ಸಣ್ಣ ಕಾಮಯ್ಯ, ಕಾಂತಪ್ಪ, ಮಂಜುನಾಥ್, ನೀಲಕಂಠ ಎಚ್ ,ಮಹಾಂತೇಶ್ ಜಡಿಯಪ್ಪ, ರೂಪ, ಅರ್ಚನಾ ,ಮಂಜುಳಾ, ಲೋಕಮ್ಮ ,ಟಿ ಬಸವರಾಜ್ ಭಾಗವಹಿಸಿದರು