ಜಿ.ಸಿ ಕವಿತಾ ಅವರಿಗೆ ತುಮಕೂರು ವಿವಿ ಯಿಂದ ಪಿಹೆಚ್‌ಡಿ ಪ್ರಧಾನ : ನಗರ ಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಅಭಿನಂದನೆ.
1 min readಜಿ.ಸಿ ಕವಿತಾ ಅವರಿಗೆ ತುಮಕೂರು ವಿವಿ ಯಿಂದ ಪಿಹೆಚ್‌ಡಿ ಪ್ರಧಾನ ____________________
ವರದಿ:ವಿಜಯಕುಮಾರ್ ತೊಡರನಾಳ್
ಚಿತ್ರದುರ್ಗ:
ಇಲ್ಲಿನ ನೆಹರು ನಗರದಲ್ಲಿ ವಾಸವಿರುವ ಶ್ರೀಮತಿ ಯಶೋದಮ್ಮ ಮತ್ತು ಶ್ರೀ ಚಂದ್ರಪ್ಪ ಅವರ ಮಗಳು ದಾವಣಗೆರೆ ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕವಿತ ಜಿ ಸಿ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ಆಗಸ್ಟ್ ೭ ರಂದು ನಡೆದ ವಿಶ್ವವಿದ್ಯಾನಿಲಯ ಘಟಿಕೋತ್ಸವ ಸಮಾರಂಭದಲ್ಲಿ ಕವಿತ ಜಿ ಸಿ ಅವರು ಮಂಡಿಸಿದ “ಫೈಟೋಕೆಮಿಕಲ್ ಅಂಡ್ ಫಾರ್ಮಕೊಲೋಜಿಕಲ್ ಪೊಟೆನ್ಶಿಯಲ್ಸ್ ಆಫ್ ಅಡೆನೋಕ್ರೈಮ್ ಅಲಿಯೇಸಿಯಂ ಮಿಯರ್ಸ್” ಎಂಬ ಮಹಾಪುಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ. ಕವಿತ ಜಿಸಿ ಅವರು ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಡಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. _____________________
ಸಾಧನೆಗೆ ಅಭಿನಂದನೆ :
ಕವಿತ ಜಿಸಿ ಅವರ ಸಾಧನೆಗೆ ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಮತ್ತು ಕುಟುಂಬ ವರ್ಗದವರು ಶ್ಲಾಘನೆ ವ್ಯಕ್ತಪಡಿಸಿ,ಅಭಿನಂದನೆ ತಿಳಿಸಿದ್ದಾರೆ.