ಟಿ ನುಲೇನೂರು ಗ್ರಾ.ಪಂ ಅದ್ಯಕ್ಷರಾಗಿ ಕಾಂತಮ್ಮ ನಾಗರಾಜ್ ಅವಿರೋಧ ಆಯ್ಕೆ
1 min read

ಟಿ ನುಲೇನೂರು ಗ್ರಾ.ಪಂ ಅದ್ಯಕ್ಷರಾಗಿ ಕಾಂತಮ್ಮ ನಾಗರಾಜ್ ಅವಿರೋಧ ಆಯ್ಕೆ
_______________________________
CHITRADURGA HOYSALA NEWS/
ವರದಿ:ವಿಜಯಕುಮಾರ್ ತೊಡರನಾಳ್
ಹೊಳಲ್ಕೆರೆ:
ತಾಲ್ಲೂಕಿನ ಟಿ ನುಲೇನೂರು ಗ್ರಾಮ ಪಂಚಾಯತಿಯ ಎರಡನೇ ಅವದಿಯ ಅದ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ಗುರುವಾರ ಚುನಾವಣೆ ನಡೆಯಿತು.
ಈ ಗ್ರಾಮ ಪಂಚಾಯತಿಯು ಅದ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ೧೪ ಸದಸ್ಯರನ್ನು ಹೊಂದಿದ್ದು, ಇಲ್ಲಿ ಎಸ್ಟಿ ಮೀಸಲಾದ ಅದ್ಯಕ್ಷ ಸ್ಥಾನಕ್ಕೆ ತೊಡರನಾಳು ಗ್ರಾಮದ ಸದಸ್ಯರಾದ ಕಾಂತಮ್ಮ ನಾಗರಾಜ್ ಅವರು ಅದ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಬಿ ಜಿ ಹಳ್ಳಿ ಗ್ರಾಮದ ಸುಶೀಲಮ್ಮ ಪರಶುರಾಮಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಎಇಇ ವೆಂಕಟರಮಣಪ್ಪ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಸಿದ್ದರಾಮಪ್ಪ,ಸಿಬ್ಬಂದಿ ವರ್ಗದವರು, ಪಂಚಾಯತಿಯ ಸರ್ವ ಸದಸ್ಯರು, ಮುಖಂಡರು ಹಾಜರಿದ್ದರು.