April 20, 2024

Chitradurga hoysala

Kannada news portal

ರಾಗಿ ಹಣ ಪಾವತಿಗೆ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ.

1 min read

ರಾಗಿ ಹಣ ಪಾವತಿಗೆ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ.

ಸಂಪಾದಕರು,ಸಿ.ಎನ್.ಕುಮಾರ್
ಚಿತ್ರದುರ್ಗ ಹೊಯ್ಸಳ ವರದಿ: ಕಾವೇರಿಮಂಜಮ್ಮನವರ್

ಹೊಸದುರ್ಗ:
ಹೊಸದುರ್ಗ ಪಟ್ಟಣ ಮತ್ತು ಶ್ರೀರಾಂಪುರ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಬಿಟ್ಟು ನಾಲ್ಕೈದು ತಿಂಗಳಾದರೂ, ರೈತರ ಖಾತೆಗೆ ಹಣ ಪಾವತಿಯಾಗಿಲ್ಲ. ರೈತರ ಖಾತೆಗೆ ಹಣ ಪಾವತಿ ಮಾಡುವವರೆಗೂ ಮೇಲೆಳುವುದಿಲ್ಲವೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಗುರುವಾರ ಅನಿರ್ದಿಷ್ಟ ಅವಧಿ ಪ್ರತಿಭಟನೆಯನ್ನು ಪ್ರಾರಂಭಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟ ಸಿದ್ಧವೀರಪ್ಪ ಮಾತನಾಡಿ, ಹೊಸದುರ್ಗ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಭ್ರಷ್ಟಾಚಾರದಿಂದ ಕರ್ನಾಟಕ ರಾಜ್ಯವೇ ಹೊಸದುರ್ಗದ ಕಡೆ ತಿರುಗಿ ನೋಡುತ್ತಿದೆ.ಸುಮಾರು 1.ಕೋಟಿ 50.ಲಕ್ಷ ಬೆಲೆಬಾಳುವ ರಾಗಿಯನ್ನು ರೈತರಿಂದ ಅಕ್ರಮವಾಗಿ ಮಾರುಕಟ್ಟೆ ಅಧಿಕಾರಿಗಳು ಕಬಳಿಸಿದ್ದಾರೆ. ಒಬ್ಬ ರೈತನಿಂದ ಪ್ರತಿ ಕ್ವಿಂಟಲ್ ಗೆ 4.ಕೆಜಿ ಹೆಚ್ಚುವರಿ ರಾಗಿ ತೆಗೆದುಕೊಂಡಿದ್ದಾರೆ.ರೈತರು ಶ್ರಮಪಟ್ಟು ಬೆಳೆದ ಆಹಾರಧಾನ್ಯಗಳನ್ನೇ ಕದ್ದು, ರೈತರ ಬೆವರ ಹನಿಯಲ್ಲಿಯೂ ಅಕ್ರಮವಾಗಿ ಹಣ ದೋಚಬೇಕೆಂದು ಹೊರಟಿರುವ ಭ್ರಷ್ಟ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಅಲ್ಲದೇ, ಹೊಸದುರ್ಗ ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮ ವೆಸಗಿರುವ ಭ್ರಷ್ಟರಿಗೆ ಕಠಿಣ ಶಿಕ್ಷೆ ಆಗಬೇಕು. ಎಲ್ಲಿಯವರೆಗೂ ರೈತರ ಖಾತೆಗೆ ಹಣಪಾವತಿ ಮಾಡುವುದಿಲ್ಲವೋ, ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. ಕೂಡಲೇ ಸರ್ಕಾರ ರೈತರ ಖಾತೆಗೆ ರಾಗಿ ಅಣ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಕೊರಟಗೆರೆ ಮಹೇಶ್ವರಪ್ಪ, ಅಧ್ಯಕ್ಷ ಅರಳಿಹಳ್ಳಿ ಬೋರೇಶ್, ಕಾರ್ಯದರ್ಶಿ ನೀರಗುಂದ ರಘು ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಕರಿಸಿದ್ದಯ್ಯ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *