May 20, 2024

Chitradurga hoysala

Kannada news portal

ಆಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆಎಂ ನಾಗರಾಜಪ್ಪ ಅವಿರೋಧ ಆಯ್ಕೆ

1 min read

ಆಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆಎಂ ನಾಗರಾಜಪ್ಪ ಅವಿರೋಧ ಆಯ್ಕೆ

ಸಂಪಾದಕರು,ಸಿ.ಎನ್.ಕುಮಾರ್

CHITRADURGAHOYSALA NEWS

ವರದಿ:ಆನಂದ್.ಡಿ ಆಲಘಟ್ಟ

ಚಿತ್ರದುರ್ಗ:

ಸಿರಿಗೆರೆ ಸಮೀಪದ ಆಲಘಟ್ಟ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಆಲಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೆಎಂ ನಾಗರಾಜಪ್ಪ ನವರು ಆಯ್ಕೆಯಾಗಿದ್ದಾರೆ ಇನ್ನು ಉಪಾಧ್ಯಕ್ಷರಾಗಿ ಲಲಿತಮ್ಮ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತಿಯ ಸದಸ್ಯರೆಲ್ಲರೂ ಸೇರಿ ಅಧ್ಯಕ್ಷರ ಸ್ಥಾನಕ್ಕೆ ಕೆ.ಎಂ ನಾಗರಾಜಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದು ಕೋಣನೂರು ಗ್ರಾಮದ ಮಹಿಳಾ ಸದಸ್ಯ 12 ಮತಗಳನ್ನು ಪಡೆಯುವುದರ ಮೂಲಕ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ಘೋಷಣೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಗ್ರಾಮದ ಶ್ರೀರಂಗನಾಥ ದೇವಸ್ಥಾನದ ಮುಂಭಾಗದಲ್ಲಿ ಪಟಾಕಿಯನ್ನು ಸೇರಿಸಿ ಸಂಭ್ರಮಿಸಿದ್ದಾರೆ. ಅಧ್ಯಕ್ಷ ಕೆಎಂ ನಾಗರಾಜಪ್ಪ ಮತ್ತು ಉಪಾಧ್ಯಕ್ಷೆ ಲಲಿತಮ್ಮ ಆಲಘಟ್ಟ ಗ್ರಾಮದ ಶ್ರೀರಂಗನಾಥ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಂಭ್ರಮಿಸಿದ್ದಾರೆ.

ಈ ಒಂದು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್, ಕಾರ್ಯದರ್ಶಿ ನಾಗರಾಜ್, ಆಲಘಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್ ,ಪಾಂಡು ,ರಮೇಶ್,ರಾಮಪ್ಪ, ತ್ರಿವೇಣಿ,ಓಬಜ್ಜ ಹಾಗೂ ಗ್ರಾಮಸ್ಥರಾದ ರಂಗಪ್ಪ, ಸಿದ್ದೀರಪ್ಪ, ತಿಮ್ಮಣ್ಣ,ನಾಗರಾಜ್ ,ಶ್ರೀನಿವಾಸ್,ಚಂದ್ರಪ್ಪ, ರೇವಣ್ಣ, ಪುನೀತ್, ಸುಧಾಕರ್,ಕೆಂಚವೀರಪ್ಪ,ರುದ್ರಮುನಿ,ಡಾ.ಚಂದ್ರಶೇರ್ ಇತರರು ಇದ್ದರು.

About The Author

Leave a Reply

Your email address will not be published. Required fields are marked *