April 17, 2024

Chitradurga hoysala

Kannada news portal

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇವರ ಪೂರ್ವಾಶ್ರಮದ ತಾಯಿ ಗಂಗಮ್ಮದುರುಗಪ್ಪ ನವರ ಶಿವಗಣಾರಾಧನೆ- ಸರ್ವ ಶರಣರ ಸಮ್ಮೇಳನದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಶೀರ್ವಚನ

1 min read

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇವರ ಪೂರ್ವಾಶ್ರಮದ ತಾಯಿ ಗಂಗಮ್ಮದುರುಗಪ್ಪ  ನವರ ಶಿವಗಣಾರಾಧನೆ- ಸರ್ವ ಶರಣರ ಸಮ್ಮೇಳನದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಶೀರ್ವಚನ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ವರದಿ:ಭರತ್ ಭಾರ್ಗವ್.ಸಿ.ಕೆ
ಹೊಳಲ್ಕೆರೆ:

ಮಠಾಧೀಶರು ಪೂರ್ವಾಶ್ರಮದ ತಂದೆ-ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಮುದಾಯಗಳ ಮಠಕ್ಕೆ ಮಠಾಧೀಶರನ್ನು ಕೊಡುಗೆಯಾಗಿ ನೀಡಿದವರನ್ನು ಸಮುದಾಯವೇ ಆರೈಕೆ ಮಾಡಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೆಕಂದವಾಡಿಯಲ್ಲಿ ಶುಕ್ರವಾರ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಶ್ರೀಮತಿ ಗಂಗಮ್ಮ ಅವರ ಶಿವಗಣಾರಾಧನೆ ಅಂಗವಾಗಿ ಏರ್ಪಡಿಸಲಾಗಿದ್ದ ಸರ್ವ ಶರಣರ ಸಮ್ಮೇಳನದಲ್ಲಿ ಶ್ರೀಗಳು ಅಶೀರ್ವಚನ ನೀಡಿದರು.

ಸಂಸ್ಕಾರಯುತ ಕೌಟುಂಬಿಕ ಹಿನ್ನೆಲೆಯುಳ್ಳ ಹಾಗೂ ಮಠಾಧೀಶರಾಗಲು ಆಸಕ್ತಿ ತೋರುವವರ ಸಂಖ್ಯೆ ವಿರಳ.
ತಾಯಿಯನ್ನು ಜೀವನದಲ್ಲಿ ಯಾರು ಮರೆಯಬಾರದು.
ಮಠಾಧೀಶರಾದವರೂ ತಾಯಿ ಸ್ಮರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಇದೇ ವೇಳೆ ಹೇಳಿದರು.

ಮನುಷ್ಯ ಮನಸಿನಲ್ಲಿ ದ್ವೇಷ ಬೆಳೆಸಿಕೊಳ್ಳಬಾರದು. ಪ್ರೀತಿ ಬೆಳೆಸಿಕೊಂಡು ದೊಡ್ಡವರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹಿರಿಯೂರು ಆದಿಜಾಂಬವ ಮಠದ ಷಡಾಕ್ಷರಮುನಿ ಸ್ವಾಮೀಜಿ, ಮುರುಘಾ ಮಠದ ಬಸವಪ್ರಭು ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಗಾಣಿಗ ಗುರುಪೀಠದ ಶ್ರೀ ಬಸವಕುಮಾರ ಸ್ವಾಮೀಜಿ.ವಾಲ್ಮೀಕಿ ಮಹಾಸಂಸ್ಥಾನ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕುಂಚಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮ ಆನಂದಪುರಿ ಸ್ವಾಮೀಜಿ,ಛಲವಾದಿ ಮಹಾಸಂಸ್ಥಾನದ ಬಸವ ನಾಗೀದೇವ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ಸಚಿವ ಎ ನಾರಾಯಣಸ್ವಾಮಿ,ಆಹಾರ ಸಚಿವ ಕೆಹೆಚ್ ಮುನಿಯಪ್ಪ, ಮಾಜಿ ಸಚಿವರಾದ ಹೆಚ್ ಆಂಜನೇಯ, ಕೆ.ಎಸ್.ಈಶ್ವರಪ್ಪ, ಗೋವಿಂದ. ಎಂ.ಕಾರಜೋಳ, ಸಂಸದ ರಮೇಶ್ ಜಿಗಜಿಣಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಮಾದಿಗ ದಂಡೋರದ ರಾಷ್ಟ್ರೀಯ ಮುಖಂಡ ಮಂದಕೃಷ್ಣ ಮಾದಿಗ, ಮಾಜಿ ಶಾಸಕ ಎ.ವಿ.ಉಮಾಪತಿ,ಬಿ ಎಸ್ ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಇದ್ದರು.

About The Author

Leave a Reply

Your email address will not be published. Required fields are marked *