ಅಜ್ಜಯನಹಟ್ಟಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ
1 min readಹೊಸದುರ್ಗ : ತಾಲ್ಲೂಕು ಮತ್ತೋಡು ಹೋಬಳಿಯ ಅಜ್ಜಯ್ಯನಹಟ್ಟಿಯ ಗ್ರಾಮದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ
ಶ್ರೀ ಕೃಷ್ಣ ಪರಮಾತ್ಮನಿಗೆ ವಿಶೇಷ ಅಲಂಕಾರ ಮಾಡಲಾಯಿತು.
ಮಂಗಳವಾರ ಗೊಲ್ಲ ಹುಡುಗರು ಊರನ್ನು ಹಸಿರು ತೋರಣಗಳಿಂದ ಸಿಂಗರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಬಾಳೆ ಗೊನೆಗಳನ್ನು ಮತ್ತು ಜಗಮಗಿಸುವ ಲೈಟಿಂಗ್ ಗಳನ್ನು ಹಾಕಿ ಊರಿನ ಪ್ರಮುಖ ಬೀದಿಗಳನ್ನು ಸಿಂಗರಿಸಿದ್ದರು. ಊರಿನ ಯುವಕರೆಲ್ಲರೋ
ಕೇಸರಿ ಟೀ ಶರ್ಟ್ ಧರಿಸಿದ್ದರು ವಿಜೃಂಭಣೆಯಿಂದ ಆಚರಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ
ಕರ್ನಾಟಕ ಯಾದವ ಮಹಾಸೇನೆಯ
ಅಜ್ಜಯ್ಯನಹಟ್ಟಿ ಗ್ರಾಮ ಘಟಕವನ್ನು ಅಗಸರ ಹಳ್ಳಿ ನಾಗರಾಜಪ್ಪ ಉದ್ಘಾಟಿಸಿದರು. ಕರ್ನಾಟಕ ಯಾದವ ಮಹಾ ಸೇನೆಯ
ರಾಜ್ಯ ಸಂಚಾಲಕ
ಪಂಚ ಲೋಕೇಶ್ ಯಾದವ್, ಮಾರುತಿ ಮುಖಂಡರಾದ ವರದರಾಜ, ಮಾರಣ್ಣ, ಪಾರ್ಥ ಪಾಲ್ಗೊಂಡಿದ್ದರು.