April 30, 2024

Chitradurga hoysala

Kannada news portal

ಜೀತ ಜೀತ ——ಜೀತ ಜೀತ ———

1 min read

ಜೀತ ಜೀತ
—————
ಬಲಿಯಾದ ವಯಸ್ಸಲ್ಲಿ ಬಲು ಕಷ್ಟ ಕೊಟ್ಟರೊ ಊರ ಕುಬೇರನ ಮನೆಯಲ್ಲಿ….

ದಪ್ಪನೆಯ ಕೋಲು ದನದ ಕೊಟ್ಟಿಗೆಯಲ್ಲಿ .. ನೋಡಿದ ಪ್ರತಿ ಕ್ಷಣ ಹೃದಯದ ಬಡಿತ ಜಲ್ ಎಂದಿತ್ತು…

ಕನುಸು ಬಿಳೋ ಒತ್ತಲ್ಲಿ..
ಬೆಳಕಿಲ್ಲದ ಕತ್ತಲಲಿ ಓಡೋಡಿ ಅಂಗಳ ಕಸವ ಹೊಡೆದೆ ನಾ ಬಲು ಕಷ್ಟ ಪಟ್ಟು….

ದಿನವಿಡೀ ಒದ್ದೆಯಾದ ಕಣ್ಣುಗಳನ್ನು ಒರೆಸಿದಳು ಅವ್ವ ಕಣ್ಣೀರಿನ ಜೊತೆ ಜೊತೆಗೆ..

ನನ್ನ ಅಕ್ಷರದ ಸಾಲಿ ತಿರುಗಿ ನೋಡದ ಹಾಗೆ ನನ್ನ ಅಪ್ಪನ ಹೆಂಡ ಖಂಡದ ಲೆಕ್ಕದಲಿ ಮುಳುಗಿದ ಕುಬೇರ.. ಕುಬೇರ

ಬುಗುರಿ ಚಿನ್ನಿ ದಂಡ ಇಡಿಯು ವ ವಯಸ್ಸಲ್ಲಿ ದಾನವ ಕಾಯೋ ಕೋಲು ನನ್ನ ಗೆಳೆಯನಗಿತ್ತು..
ಜೀತದ ಕೋಲು..

ಬೆಳಾಕಿಲ್ಲಾದ ಗುಡಿಸಲಲ್ಲಿ ಅವ್ವನ ಕಿವಿಯಲ್ಲಿ ತುಸು ಮೆಲ್ಲಾನೆ ಕೈ ಕಾಲು ಬ್ಯಾನಿಯನು ಹೇಳುತ್ತಾ ಮಲಗಿದ್ದೆ ಜೀತವೆಂಬ ಭೂತದಲಿ….

ಕನಸಿಲ್ಲಾದ ಜೀತ ಬದುಕು ಮುರಿದ ಜೀತ….ಸಾಕುಮಾಡಿ ಜೀತ…

——————————
✍️✍️✍️
ಮಂಜುನಾಥ್ ನೀರ್ಥಡಿ

About The Author

Leave a Reply

Your email address will not be published. Required fields are marked *