ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ , ಶಾಸಕಿ ಪೂರ್ಣಿಮಾ ಚಾಲನೆ
1 min readಹಿರಿಯೂರು: ಹಿರಿಯೂರು ತಾಲೂಕಿನಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್ ರವರು ಹಾಗೂ ಹಿರಿಯೂರು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಕೃಷಿ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕಾರ್ಯಕ್ರಮವನ್ನು ರೈತರಿಗಾಗಿ ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮದಲ್ಲಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಶಿಕಲಾ, ಜಿಪಂ ಸದಸ್ಯೆ ಶ್ರೀಮತಿ ರಾಜೇಶ್ವರಿ, ಹೆಚ್ ಆರ್ ತಿಮ್ಮಯ್ಯ, ಸಿದ್ದರಾಮಣ್ಣ, ಸುರೇಶ್, ಸತೀಶ್ ಮುಂತಾದವರು ಉಪಸ್ಥಿತರಿದ್ದರು.