ಬಿಡಿಎ ಕಮಿಷನರ್ ಅಮಾನತು ಮಾಡಿ ! ಗಾಂಧಿ, ಅಂಬೇಡ್ಕರ್ ಅವಮಾನಿಸಿದ ಐಎಎಸ್ ಅಧಿಕಾರಿ ! ವಿರುದ್ದ ರಾಜ್ಯದಾದ್ಯಂತ ಖಂಡನೆ.
1 min readಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಐಎಸ್ ಅಧಿಕಾರಿಯೊಬ್ಬರು ಶೂ ಧರಿಸಿ ಮಹಾತ್ಮಗಾಂಧಿಜಿ ಅವರ ಫೋಟೋಗೆ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರದ ಆಯುಕ್ತರಾದ ಡಾ.ಹೆಚ್.ಆರ್. ಮಹಾದೇವ್ ಶೂ ಬಿಚ್ಚದೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗೌರವ ತೋರಿದ್ದಾರೆ.
ಬಿಡಿಎ ಕಮಿಷನರ್ ಎಂಬುದು ರಾಜಕಾರಣಿಗಳಿಗೆ ಕಾಮದೇನು ಇದ್ದಂತೆ. ಕೋಟಿ ಕೋಟಿ ಲಂಚ ಕೊಟ್ಟು ಈ ಬಿಡಿಎ ಕಮಿಷನರ್ ಹುದ್ದೆಗೆ ಬರಲಾಗುತ್ತದೆ. ಹಿರಿಯ ಐಎಎಸ್ ಅಧಿಕಾರಿಗಳನ್ನು ಬಿಡಿಎಗೆ ಕಮಿಷನರ್ ಆಗಿ ನೇಮಿಸುವುದು ವಾಡಿಕೆ. ರಾಜಧಾನಿಯ ಅಭಿವೃದ್ದಿಯ ಮುನ್ನೋಟ ಹೊಂದಿರುವ ಹಿರಿಯ ಐಎಎಸ್ ಅಧಿಕಾರಿಯ ಬದಲಿಗೆ ಹೆಚ್ಚಿನ ಲಂಚದ ಆಸೆಗಾಗಿ ಕಿರಿಯ ಅಧಿಕಾರಿಯಾಗಿರುವ ಡಾ ಎಚ್ ಆರ್ ಮಹದೇವರನ್ನು ಕಮಿಷನರ್ ಆಗಿ ನೇಮಿಸಲಾಗಿದೆ.
ಇದೀಗ ದಲಿತ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಡಾ ಎಚ್ ಆರ್ ಮಹದೇವ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ. ಇತ್ತಿಚೆಗೆ ಬಿಡಿಎಯಲ್ಲಿ ಜಾತಿ ಕೇಳಿ ಹುದ್ದೆ ನೀಡುವ ಸಂಬಂಧ ಅರ್ಜಿಯಲ್ಲಿ ಜಾತಿ ನಮೂದಿಸಿದ್ದರು. ಲಿಂಗಾಯತ ಅಧಿಕಾರಿಯಾಗಿರುವ ಡಾ ಎಚ್ ಆರ್ ಮಹದೇವ್ ರವರು ಹಿಂದುಳಿದ ದಲಿತ ಅಧಿಕಾರಿಗಳು, ಸಿಬ್ಬಂದಿಗಳನ್ನು ತುಳಿಯುತ್ತಿದ್ದಾರೆ ಎಂಬ ಆರೋಪ ಬಿಡಿಎನಲ್ಲಿದೆ. ಇದೀಗ ಡಾ ಎಚ್ ಆರ್ ಮಹದೇವ್ ರ ಅಂಬೇಡ್ಕರ್ ವಿರೋಧಿ ನಿಲುವು ಬಟಾಬಯಲಾಗಿದ್ದು, ಸರ್ಕಾರ ಇವರನ್ನು ಅಮಾನತ್ತು ಮಾಡಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.